ವರದಿ: ಗಣೇಶ್ ಹೆಗಡೆ
ಬೆಂಗಳೂರು: 22.12.2021 ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆಗೆ ಸುರಂಗ ಮಾರ್ಗವನ್ನು ಪ್ರಾರಂಭಿಸಿರುವ URJA TBM, ಈ 900ಮೀ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದೆ.
ಹೌದು.. 6 ತಿಂಗಳ ನಂತರ ಇಂದು 900 ಮೀಟರ್ ಸುರಂಗ ಕೊರೆದು ಉರ್ಜಾ ಟಿಬಿಎಂ (URJA TBM) ಹೊರಬಂದಿದೆ. 2021ರ ಡಿ.22ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಆರಂಭಿಸಿ ಪಾಟರಿ ಟೌನ್ ನಿಲ್ದಾಣದ ಕಡೆ ಸುರಂಗ ಪ್ರವೇಶಿಸಿತ್ತು ಉರ್ಜಾ. ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಸುರಂಗ ಮಾರ್ಗ ಇದಾಗಿದೆ.
ಶಿವಾಜಿನಗರದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಸ್ಟೇಷನ್ ಬಳಿ ಬ್ರೇಕ್ ಥ್ರೂ ಆಗಿತ್ತು.ಮೊದಲ ಊರ್ಜಾ ಬ್ರೇಕ್ ಥ್ರೂ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ವೀಕ್ಷಿಸಿದ್ದರು.
PublicNext
30/06/2022 04:55 pm