ಬೆಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ದಿನನಿತ್ಯ ಬಳಸುವ ವಸ್ತುಗಳು ಸಹ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ನೈಸ್ ರಸ್ತೆ ಶುಲ್ಕ ಹೆಚ್ಚಳದ ಶಾಕ್ ಎದುರಾಗಿತ್ತು ಆದರೆ ಸದ್ಯ ಸಂಸ್ಥೆ ದರ ಏರಿಕೆಯನ್ನು ಮುಂದೂಡಿ ಕೊಂಚ ರಿಲೀಫ್ ನೀಡಿದೆ.
ಬೆಂಗಳೂರಿನ ನೈಸ್ ರಸ್ತೆ ಟೋಲ್ ದರವನ್ನು ಕೂಡ ಹೆಚ್ಚಳ ಮಾಡಲಾಗುತ್ತದೆ ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು.
ಯಾವ ಮಾರ್ಗದಲ್ಲಿ ಎಷ್ಟು ದರ ಹೆಚ್ಚಳದ ಪ್ರಸ್ತಾವನೆ ಇತ್ತು?
ಹೊಸೂರು-ಬನ್ನೇರುಘಟ್ಟ ರಸ್ತೆಯಲ್ಲಿ ನೀವು ಸಂಚರಿಸುವ ಬೈಕ್‌ಗಳಿಗೆ 20 ರೂ. ಟೋಲ್ ದರ, ಕಾರುಗಳಿಗೆ 45 ರೂ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿತ್ತು. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯಲ್ಲಿ ಸಂಚರಿಸುವ ಕಾರ್‌ಗಳಿಗೆ 35, ಬೈಕ್‌ಗಳಿಗೆ 12 ರೂ. ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ ರಸ್ತೆಯಲ್ಲಿ ಸಂಚರಿಸುವ ಕಾರ್ ಗಳಿಗೆ 25, ಬೈಕ್‌ಗಳಿಗೆ 8ರೂ ಗೆ ಏರಿಸುವುದಾಗಿ ನೈಸ್ ಸಂಸ್ಥೆ ತಿಳಿಸಿತ್ತು.
PublicNext
30/06/2022 02:35 pm