ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸಸ್ಯಕಾಶಿ ಅಂದ್ರೆ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್. ಆದ್ರೆ ಈ ಕಬ್ಬನ್ ಪಾರ್ಕ್ ನಲ್ಲಿ ನಾನಾ ಸಮಸ್ಯೆಗಳು ಕಾಡುತ್ತಾ ಇವೆ. ಬ್ಯಾರಿಕೇಡ್ ಗಳಿಲ್ಲದೆ, ಗೇಟ್ ಗಳಿಲ್ಲದೆ , ತಂತಿ ಬೇಲಿಗಳಿಲ್ಲದೆ, ಯಾರಂದ್ರೆ ಅವ್ರು ನೈಟ್ ಟೈಮ್ ನಲ್ಲಿ ಒಳಗಡೆ ನುಗ್ಗುತ್ತಿದ್ದಾರೆ.
ಗ್ರಂಥಾಲಯದ ಮುಂದೆ ಇರುವ ಹೂವಿನ ಗಿಡಗಳನ್ನು ಕಿತ್ಕೊಂಡು ಹೋಗುತ್ತಿದ್ದಾರೆ. ಸದ್ಯ ಪಾರ್ಕ್ ನಲ್ಲಿ ವಾಕಿಂಗ್ ಮಾಡುವವರಿಗೆ ಸಂಕಷ್ಟ ಎದುರಾಗಿದೆ. ಓಡಾಡಲು ಆಗದೆ, ಕೆಟ್ಟ ವಾಸನೆ ತಾಳಲಾರದೆ ಸಂಕಷ್ಟ ಎದುರಿಸುತ್ತಿದ್ದಾರೆ. ಮ್ಯಾನ್ ಹೋಲ್ ಓಪನ್ ಆಗಿ ಮೋರಿ ನೀರು ಫುಟ್ ಪಾತ್ ಮೇಲೆ ಹರಿಯುತ್ತಿದೆ. ಈ ಅವ್ಯವಸ್ಥೆ ಕಂಡ ಜನ ಅಧಿಕಾರಿಗಳನ್ನು ದೂರಿದ್ದಾರೆ.
ಒಟ್ಟಿನಲ್ಲಿ ಪಾರ್ಕ್ ಫುಲ್ ಪ್ರಾಬ್ಲಂಗಳಿಂದ ಕೂಡಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕಿದೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
13/06/2022 10:48 pm