ಬೆಂಗಳೂರು: ಪರಪ್ಪನ ಅಗ್ರಹಾರದಿಂದ ರಾಯಸಂದ್ರಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
'ರಸ್ತೆ ಕಾಮಗಾರಿ ಶುರುವಾಗಿ ಒಂದು ವರ್ಷಗಳು ಕಳೆದರೂ ರಸ್ತೆಯ ಸ್ಥಿತಿ ಹಾಗೆಯೇ ಉಳಿದಿದೆ. ರಸ್ತೆ ಮೇಲೆ ಹಾಕಿರುವ ಜಲ್ಲಿಕಲ್ಲು ಮಳೆಗೆ ಕೊಚ್ಚಿಹೋಗಿ ರಸ್ತೆ ಉದ್ದಕ್ಕೂ ಗುಂಡಿಗಳೇ ಕಂಡುಬರುತ್ತಿವೆ. ಅದರಲ್ಲೂ ಮಳೆ ಬಂದು ನಿಂತು ಬಿಟ್ಟರೆ ಸಾಕು ರಸ್ತೆಯಲ್ಲಿರುವ ಗುಂಡಿಗಳು ನೀರಿನಿಂದ ತುಂಬಿ ವಾಹನ ಸವಾರರು ಪರದಾಡುವಂತೆ ಮಾಡುತ್ತಿದೆ.
ಈ ಕೂಡಲೇ ಸ್ಥಳೀಯ ಪಂಚಾಯಿತಿ ಸದಸ್ಯರು ಎಚ್ಚೆತ್ತುಕೊಂಡು ಒಂದು ವರ್ಷಗಳಿಂದ ನಿಂತಿರುವ ಈ ಕಾಮಗಾರಿಯನ್ನು ಮತ್ತೆ ಆರಂಭಿಸಬೇಕು ಎನ್ನುವುದು ಪಬ್ಲಿಕ್ ಆಗ್ರಹ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
09/06/2022 12:34 pm