ಬೆಂಗಳೂರು: ಸ್ಮಾರ್ಟ್ ಸಿಟಿ ಲಿ. ಸಂಸ್ಥೆ ಅವೆನ್ಯೂ ರಸ್ತೆಯಲ್ಲಿ ಒಂದೂವರೆ ವರ್ಷದಿಂದ ಟೆಂಡರ್ ಶ್ಯೂರ್ ಕಾಮಗಾರಿ ನಡೆಸುತ್ತಿದೆ. ಈ ತಿಂಗಳ ಅಂತ್ಯಕ್ಕೆ ಎಲ್ಲಾ ಕೆಲಸ ಪೂರ್ಣಗೊಳಿಸುವುದಾಗಿ ತಿಳಿಸಿದೆ.
ಕೆ.ಆರ್.ಮಾರ್ಕೇಟ್ ಜಂಕ್ಷನ್ ಬಳಿಯ ಎಸ್ ಜೆಪಿ ರಸ್ತೆಯಿಂದ ಕೆಂಪೇಗೌಡ ರಸ್ತೆಗೆ ಸಂಪರ್ಕ ಕಲ್ಪಿಸುವ 1.2 ಕಿ.ಮೀ ಅವೆನ್ಯೂ ರಸ್ತೆಯನ್ನು 14 ಕೋಟಿ ರೂ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ಅಭಿವೃದ್ಧಿ ಮಾಡುತ್ತಿದೆ. ಕೇವಲ 6 ತಿಂಗಳಲ್ಲಿ ಮುಗಿಸುವು ದಾಗಿ ಕೊವೀಡ್ 2 ಅಲೆಯ ಲಾಕ್ ಡೌನ್ ವೇಳೆ ಕಾಮಗಾರಿ ಕೈಗೆತ್ತಿ ಕೊಂಡಿತ್ತು. ಆಮೇ ವೇಗದಲ್ಲಿ ಕೆಲಸ ಮಾಡುತ್ತಿದ್ದು, ನಿಗದಿತಗಿಂತ ದುಪದಪಟ್ಟು ಅವಧಿಯಾದರೂ ಕೆಲಸ ಮುಕ್ತಾಯವಾಗಿಲ್ಲ.
ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಏ.24 ರಂದು ಕಾಮಗಾರಿ ವೀಕ್ಷಣೆ ಮಾಡಿ ಹಗಲು- ರಾತ್ರಿ ಕೆಲಸ ಮಾಡಿ ಮೇ. 20 ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದರು.
Kshetra Samachara
08/06/2022 09:57 am