ಬೆಂಗಳೂರು: ಇದು ಕಳಪೆ ಕಾಮಗಾರಿಯ ಇನ್ನೊಂದು ಮುಖ. ಒಂದೇ ರಾತ್ರಿಗೆ ಹೊಸದಾಗಿ ಹಾಕಿದ್ದ ಟಾರ್ ರಸ್ತೆ ಕಿತ್ತು ಕೈಗೆ ಬಂದಿದೆ. ಈ ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಬೊಮ್ಮನಹಳ್ಳಿ ಬೇಗೂರು ರಸ್ತೆಯಲ್ಲಿ. ಮೊನ್ನೆ ರಾತ್ರಿಯಷ್ಟೇ ಹಾಕಿದ ಹೊಸದಾದ ಟಾರ್ ರಸ್ತೆಯ ಟಾರ್‌ಅನ್ನು ಈಗ ಮಕ್ಕಳು ಕಿತ್ತು ಹಾಕಿ ಆಟ ಆಡುತ್ತಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಗೆ ಈ ರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ಹಾಳಾದ ರಸ್ತೆಗೆ ಬಿಬಿಎಂಪಿ ಮೊನ್ನೆ ರಾತ್ರಿ ಹೊಸದಾಗಿ ಟಾರ್ ಹಾಕಿದ್ದರು.
ಕಳಪೆ ಕಾಮಗಾರಿಯ ರಸ್ತೆಯ ಕೆಲಸ ಹೇಗಿದೆ ಎಂದು ದೃಶ್ಯದಲ್ಲಿ ನೋಡಬಹುದು. ಅದರಲ್ಲೂ ಬೇಗೂರಿನ ಬಿಬಿಎಂಪಿ ಕಚೇರಿ ಮುಂಭಾಗವೇ ಇರುವಂತಹ ರಸ್ತೆ ಇದು. ವಾಹನಗಳು ರಸ್ತೆಯ ಮೇಲೆ ಓಡಾಡಿ ಟಾರ್ ಕಿತ್ತು ಹೋಗಿ ರಸ್ತೆಯ ಮೇಲೆ ಗುಂಡಿಗಳು ನಿರ್ಮಾಣಗೊಳ್ಳುತ್ತಿವೆ. ಬಿಬಿಎಂಪಿ ಕಚೇರಿಯ ಮುಂಭಾಗವೇ ಈ ರೀತಿ ಕಳಪೆ ಕಾಮಗಾರಿ ಮಾಡಿದ್ದು ಇನ್ನು ಬೇರೆಯ ರಸ್ತೆಗಳ ಕಾಮಗಾರಿ ಹೇಗೆ ಆಗಿರಬಹುದು ಎಂದು ಒಮ್ಮೆ ಯೋಚಿಸಬೇಕು. ಕೂಡಲೇ ಈ ರೀತಿ ಕಳಪೆ ಕಾಮಗಾರಿ ಮಾಡಿರುವ ಕಂಟ್ರಾಕ್ಟರ್ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
28/05/2022 10:53 pm