ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹತ್ತು ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆ: ಅಧಿಕಾರಿಗಳಿಗೆ ಯಾಕೆ ಕಂಡಿಲ್ಲ ಇಲ್ಲಿನ ಅವ್ಯವಸ್ಥೆ?

ಬೆಂಗಳೂರು: ಶಾಲೆ ಕಾಲೇಜುಗಳಿಗೆ ಸಲೀಸಾಗಿ ಹೋಗಲಾಗದೇ ವಿದ್ಯಾರ್ಥಿಗಳ ಪರದಾಟ.. ಆರಾಮಾಗಿ ವಾಕಿಂಗ್ ಹೋಗೋಕಾಗದೇ ವಯಸ್ಸಾದವರ ಒದ್ದಾಟ.. ಸಾಹಸ ಮಾಡಿ ಹೊರಗೆ ಹೋದವರು ಜಾರಿ ಬಿದ್ದು ಗೋಳಾಟ...ಇಷ್ಟಕ್ಕೆಲ್ಲಾ ಕಾರಣ ಆಗಿರೋದು ಇಲ್ಲಿನ ರಸ್ತೆ. ಬರೋಬ್ಬರಿ ಹತ್ತು ವರ್ಷಗಳಿಂದ ಇಲ್ಲಿ ಇದೇ ಸ್ಥಿತಿ ಇದೆ.

ಅಷ್ಟಕ್ಕೂ ಈ ದೃಶ್ಯಗಳು ಕಂಡುಬಂದಿರೋದು ಸಿಲಿಕಾನ್ ಸಿಟಿಯ ನಾಯಂಡಳ್ಳಿಯ ಫ್ಲೇಓವರ್ ಹತ್ತಿರ... ಇಳಿಜಾರಿನಿಂದ ಕೂಡಿದ ಈ ರಸ್ತೆ ಹತ್ತು ವರ್ಷಗಳಿಂದ ಡಾಂಬರು ಕಾಣದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ..ಇಲ್ಲಿ ಅದೆಷ್ಟೋ ವಾಹನ ಸವಾರರು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇಲ್ಲಿನ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ‌ ಯಾರೇ ಶಾಸಕರು, ಕಾರ್ಪೊರೇಟರ್ ಗಳು ಬಂದ್ರೂ ಈ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಒಟ್ಟಿನಲ್ಲಿ ಹತ್ತು ವರ್ಷಗಳಿಂದ ಹೀಗೆ ಇರುವ ಈ ರಸ್ತೆಯ ಸಮಸ್ಯೆಗೆ ಅದ್ಯಾವಾಗ ಮುಕ್ತಿ ಸಿಗುತ್ತೊ.? ಅಧಿಕಾರಿಗಳು ಇತ್ತ ಅದ್ಯಾವಾಗ ಕಣ್ಣೆತ್ತಿ ನೋಡ್ತಾರೋ ಅಂತ ಕಾಯುತ್ತಲೇ ಇದ್ದಾರೆ ಇಲ್ಲಿನ ನಿವಾಸಿಗಳು.

ರಂಜಿತಾಸುನಿಲ್, ಮೆಟ್ರೋ ಬ್ಯೂರೊ, ಪಬ್ಲಿಕ್ ನೆಕ್ಸ್ಟ್.

Edited By : Nagesh Gaonkar
PublicNext

PublicNext

26/05/2022 08:02 pm

Cinque Terre

42.96 K

Cinque Terre

2

ಸಂಬಂಧಿತ ಸುದ್ದಿ