ಬೆಂಗಳೂರು: ಜವರಾಯನ ತರ ರಸ್ತೆ ಮಧ್ಯದಲ್ಲೇ ಬಾಯ್ತೆರದ ಗುಂಡಿಗಳು, ಮೊತ್ತೊಂದು ಕಡೆ ಟ್ರಾಫಿಕ್ ಜಾಮ್, ದಿನಕ್ಕೆ ಹತ್ತಾರು ಆಕ್ಸಿಡೆಂಟ್ ಆಗುವ ಆಕ್ಸಿಡೆಂಟ್ ಸ್ಪಾರ್ಟ್. ಅಂದಹಾಗೆ ಈ ದೃಶ್ಯಗಳೆಲ್ಲ ಕಂಡುಬಂದಿದ್ದು ಕೆಂಗೇರಿ ಉಪನಗರದ ಬಂಡೆಮಠದ ಹತ್ತಿರ ಬರೊಬ್ಬರಿ ಮೂರ್ನಾಲ್ಕು ಕಿಲೋ ಮೀಟರ್ (BWSS)ನವರು ತೋಡಿ ಹಾಗೆ ಬಿಟ್ಟಿದ್ದಾರೆ. ತಿಂಗಳೇ ಕಳೆದರು ಸಹ ಗುಂಡಿಗಳನ್ನು ಮುಚ್ಚಿ ಕಾಮಗಾರಿ ಕಂಪ್ಲೀಟ್ ಮಾಡಿಲ್ಲ.
ಇನ್ನೂ ಈ ಜಾಗದಲ್ಲಿ ಹಲವಾರು ಅಪಾರ್ಟ್ಮೆಂಟ್‌ಗಳು, ದೇವಸ್ಥಾನ, ಮಠಗಳಿವೆ. ಅಷ್ಟೇ ಅಲ್ಲದೆ ತಾವರೆಕೆರೆ, ಕುಂಬಳಗೋಡು ಬಿಡದಿ, ಉಪನಗರಕ್ಕೆ ಹೋಗುವ ವಾಹನಗಳು ಈ ದಾರಿಯಲ್ಲೇ ಚಲಿಸುತ್ತವೆ. ಹೀಗಾಗಿ ಭಾರಿ ಜನದಟ್ಟಣೆ ಇರುವ ಈ ರಸ್ತೆಯಲ್ಲಿ ದಿನಕೊಂದು ಆಕ್ಸಿಡೆಂಟ್ ಆಗಿ ಜನರು ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ. ಇನ್ನು ಈ ಬಗ್ಗೆ ಸಣ್ಣದೊಂದು ವಾಕ್ ಥ್ರೂ ಇದೆ ನೋಡೋಣ ಬನ್ನಿ.
PublicNext
22/05/2022 05:05 pm