ರಿಪೋರ್ಟ್: ರಂಜಿತಾಸುನಿಲ್.
ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರಿನಿಂದ ಜನ್ರು ಕಷ್ಟ ಪಡ್ತಿದ್ರೆ, ಮತ್ತೊಂದು ಕಡೆ ಬೇಕರಿಯ ಮಾಲೀಕರು ಕೂಡ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
ಹೌದು. ರಸ್ತೆಗಳು ಪೂರ್ತಿಯೂ ಕೆಸರು, ಮತ್ತೊಂದು ಕಡೆ ರಾಜಕಾಲುವೆಯಿಂದ ಬಂದ ನೀರಿ ನಿಂದ ಬೇಕರಿಯ ಪದಾರ್ಥಗಳೆಲ್ಲ ಕೊಚ್ಚಿ ಹೋಗಿದೆ.ಅಕ್ಕಿ ಮೂಟೆಯಲ್ಲಿ ಬರಿ ಕೊಳಚೆ ನೀರೆ ತುಂಬಿದೆ.
ಇದ್ರಿಂದ ಬೇಕರಿಯ ಫ್ರಿಡ್ಜ್ ಕೆಟ್ಟಿ ಹೋಗಿದೆ. ಓವನ್ ಕೂಡ ಹಾಳಾಗಿದ್ಯಂತೆ. ಕಳೆದ ವರ್ಷವೂ ಹೀಗೆ ನಷ್ಟ ಅನುಭವಿಸಿದ ಬೇಕರಿ ಮಾಲೀಕರು ಈ ವರ್ಷವೂ ಹೀಗೆ ಆಗಿದೆ ಅಂತ ತಲೆ ಮೇಲೆ ಕೈ ಇಡುತ್ತಿದ್ದಾರೆ.
ಲಾಸ್ ಆಗೋದು ಒಂದು ಕಡೆಯಾದ್ರೆ ಮತ್ತೊಂದು ಕಡೆ, ಈ ಕ್ಲೀನ್ ಮಾಡುವಷ್ಟರಲ್ಲಿ ಜೀವ ಹೋಗುತ್ತೆ. ಕೊಳಚೆ ಕ್ಲೀನ್ ಮಾಡಿ ಆಸ್ಪತ್ರೆ ಸೇರುವ ಸ್ಥಿತಿ ಬಂದಿದೆ ಅಂತಾರೆ ಬೇಕರಿ ಮಾಲಿಕರು.
PublicNext
19/05/2022 09:03 am