ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆ ನೀರು ನಿಂತು ಕೆಸರು ಗದ್ದೆಯಾದ ರಸ್ತೆ, ವಿದ್ಯಾರ್ಥಿಗಳ ಪರದಾಟ

ವರದಿ: ಬಲರಾಮ್ ವಿ

ಬೆಂಗಳೂರು: ಮಳೆಯೂ ಪ್ರತಿದಿನ ಸುರಿಯುತ್ತಿರುವುದರಿಂದ ಬೆಂಗಳೂರಿನ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಹೌದು..ಪ್ರತಿನಿತ್ಯ ಮಳೆ ಸುರಿಯುತ್ತಿರುವುದರಿಂದ ಕೆಆರ್ ಪುರದ ಮೇಡಹಳ್ಳಿಯ ಜ್ಯೋತಿ ನಗರದ ರಸ್ತೆಯು ಕೆಸರು ಗದ್ದೆಯಂತೆ ಆಗಿದೆ. ಇದರಿಂದ ವಾಹನ‌ ಸವಾರರು ಹಾಗೂ ವಿದ್ಯಾರ್ಥಿಗಳು ಕೆಸರಿನಲ್ಲಿ ನಡೆಯುವಂತಾಗಿದೆ.

ಪ್ರತಿಸಲವೂ ಸಚಿವರಿಗೂ ಹಾಗೂ ಅಧಿಕಾರಗಳಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕಟ್ಟಡಗಳ ಅವಶೇಷಗಳು ರಸ್ತೆಯಲ್ಲಿ ಸುರಿಯುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹರಸಾಹಸ ಪಡುವಂತಾಗಿದೆ. ಸರ್ಕಾರ ಅದಷ್ಟು ಬೇಗ ಈ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿದರು.

Edited By : Shivu K
Kshetra Samachara

Kshetra Samachara

13/05/2022 09:11 am

Cinque Terre

3.82 K

Cinque Terre

0

ಸಂಬಂಧಿತ ಸುದ್ದಿ