ಬೆಂಗಳೂರು:ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗ ಸಂಖ್ಯೆ ವಿ - 365ವೈ ಹವಾನಿಯಂತ್ರಿತ ವಜ್ರ ಸಾರಿಗೆ ಯನ್ನು ಯಶವಂತಪುರ ಟಿಟಿಎಂಸಿ ಯಿಂದ ಕೆಂಪೇಗೌಡ ಬಸ್ ನಿಲ್ದಾಣ ಮೂಲಕ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಸಾರಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.
ಇದೇ ಬುಧವಾರದಿಂದ ಬಸ್ ವ್ಯವಸ್ಥೆ ಜಾರಿಗೆ ಬರುತ್ತಿದ್ದು, ಬೆಳಗ್ಗೆ 8.30 ಹಾಗೂ 9 ಗಂಟೆಗೆ ಬಸ್ ಹೊರಡಲಿದೆ. ಬಳಿಕ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಿಂದ ಸಂಜೆ 6.30 ಮತ್ತು 7 ಗಂಟೆಗೆ ವಾಪಸ್ ಬಸ್ ಯಶವಂತಪುರ ಟಿಟಿಎಂಸಿಗೆ ಬರಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
09/05/2022 09:36 pm