ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿಧಾನಗತಿಯಲ್ಲಿ ಸಾಗುತ್ತಿರುವ ಬೇಗೂರು ಸೇತುವೆ ಕಾಮಗಾರಿ

ಬೆಂಗಳೂರು: ಇದು ಬೇಗೂರು ಕೆರೆ ಕೋಡಿ ಬ್ರಿಡ್ಜ್. ಇಲ್ಲಿ ನಾಲ್ಕು ವರ್ಷಗಳ ಹಿಂದೆ ಇದ್ದಂತಹ ಹಳೆಯ ಸೇತುವೆಯನ್ನು ಹೊಡೆದು ಹೊಸ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ. ಆದರೆ ಈ ಬ್ರಿಡ್ಜ್ ಕಾಮಗಾರಿ ನಾಲ್ಕು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿದೆ. ಈಗ ಮತ್ತೆ ಮೂರು ತಿಂಗಳಿನಿಂದ ಕಾಮಗಾರಿ ನಿಂತೇ ಹೋಗಿದೆ.

ಈ ರಸ್ತೆಯ ಮೇಲೆ ದಿನವಿಡಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ನಿಧಾನಗತಿಯಿಂದ ನಡೆಯುತ್ತಿರುವಂತಹ ಕಾಮಗಾರಿಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲೂ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳು ಬಂದಾಗಿದ್ದು, ರಾತ್ರಿಯ ವೇಳೆ ದ್ವಿಚಕ್ರವಾಹನ ಸವಾರರು ಗಲ್ಲಿ ಗಲ್ಲಿ ಸುತ್ತಾಡಿಕೊಂಡು ಹೋಗಬೇಕಾಗಿದೆ.

ರಾತ್ರಿಯ ವೇಳೆ ಇಲ್ಲಿ ರಸ್ತೆ ಅಪಘಾತಗಳು ಕೂಡ ಆಗುತ್ತಿದೆ. ಇದಕ್ಕೆ ಕಾರಣ ಅಲ್ಲಿ ಯಾವುದೇ ರೀತಿಯ ರೆಫ್ಲೆಕ್ಟರ್‌ಗಳು ಇರದ ಹಿನ್ನೆಲೆಯಲ್ಲಿ ರಾತ್ರಿಯ ವೇಳೆ ಅಪಘಾತಗಳು ಆಗುತ್ತಿದೆ. ಇದು ಬೇಗ್ ಊರಿನಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ. ವೇಗವಾಗಿ ಬ್ರಿಜ್ ಕಾಮಗಾರಿಯನ್ನು ಮುಗಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು.

Edited By : Shivu K
Kshetra Samachara

Kshetra Samachara

06/05/2022 07:45 pm

Cinque Terre

3.23 K

Cinque Terre

3

ಸಂಬಂಧಿತ ಸುದ್ದಿ