ಬೆಂಗಳೂರು - ನಮ್ಮ ಮೆಟ್ರೋ 3 ಹಂತವನ್ನು 2 ಕಿ.ಮೀ ವಿಸ್ತರಿಸಲು ನಿರ್ಧರಿಸಲಾಗಿದೆ. ಜೆ.ಪಿ. ನಗರದಿಂದ ಹೆಬ್ಬಾಳದ ವರೆಗಿನ ಮಾರ್ಗವನ್ನು ಕೆಂಪಾಪುರದವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಭಾರತೀಯ ರೈಲ್ವೇ ತಾಂತ್ರಿಕ ಮತ್ತು ಆರ್ಥಿಕ ಸೇವೆ ಲಿಮಿಟೆಡ್ ( ರೈಟ್ಸ್ ) ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಗೆ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿದೆ.
ಈ ಡಿಪಿಅರ್ ಅನ್ನು ಬಿಎಂಆರ್ ಸಿಎಲ್ ರಾಜ್ಯ ಸರ್ಕಾರಕ್ಕೆ ಕಳುಹಿಸಲಿದೆ. ಬಳಿಕ ರಾಜ್ಯ ಸರ್ಕಾರ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಅನುಮತಿಗಾಗಿ ವರದಿ ಕಳುಹಿಸಲಿದೆ.
ಜೆ.ಪಿ.ನಗರದ 4ನೇ ಹಂತದಿಂದ ಕೆಂಪಾಪುರದವರೆಗೆ 22 ನಿಲ್ದಾಣ ಗಳೊಂದಿಗೆ 32.15 ಕಿಮೀ ಮಾರ್ಗ ವನ್ನು ಹೊಂದಿದೆ. ಹಿಂದಿನ ಯೋಜನೆ ಪ್ರಕಾರ ಹಂತ-3 ರಲ್ಲಿ ಹೆಬ್ಬಾಳದ ರೈಲು ನಿಲ್ದಾಣಕ್ಕೆ ಕೊನೆಗೊಳಿಸಲಾಗಿತ್ತು. ವಿಮಾನ ನಿಲ್ದಾಣ ಮಾರ್ಗ ಹಂತ- 2 ಎ 2ಬಿ ಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
02/05/2022 05:55 pm