ವರದಿ-ಗಣೇಶ್ ಹೆಗಡೆ
ಬೆಂಗಳೂರು:ಯಶವಂತಪುರ-ರಾಜಾಜಿ ನಗರ-ಮಹಾಲಕ್ಷ್ಮಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮೈಸೂರು ಸ್ಯಾಂಡಲ್ ಸೋಪು ಫ್ಯಾಕ್ಟರಿ ವೃತ್ತದಲ್ಲಿರುವ ಉದ್ಯಾನವನದಲ್ಲಿ ಸ್ಥಾಪನೆ ಆಗಿರುವ ಮೂರು ಪುತ್ಥಳಿಗಳು ಮುಸುಕಿನೊಳಗೆ ಮರೆಯಾಗಿ ತೆರೆ ಕಾಣಲು ಹಲವು ತಿಂಗಳುಗಳಿಂದ ಕಾಯುತ್ತಿವೆ.
ಈ ಉದ್ಯಾನವನ ಸುಮಾರು ಒಂದುವರೆ ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದು, ಇದಕ್ಕೆ ಬಸವ ಧಾಮ ಎಂದು ಹೆಸರಿಡಲಾಗಿದೆ. ಅದರೊ ಳಗೆ ಕ್ರಾಂತಿ ಪುರುಷರಾದ ಜಗ ಜ್ಯೋತಿ ಬಸವೇಶ್ವರರು , ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ, ಹಾಗೂ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಪುತ್ಥಳಿ ನಿರ್ಮಿಸಿ ಲೋಕಾರ್ಪಣೆ ಗೊಳಿಸುವ ಯೋಜನೆ ಆಗಿದೆ.
ಅದರಂತೆ ಜಗ ಜ್ಯೋತಿ ಬಸವೇಶ್ವರರು , ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ, ಹಾಗೂ ಆದಿಚುಂಚನಗಿರಿ ಶ್ರೀ ಬಾಲಗಂಗಾ ಧರನಾಥ ಮಹಾಸ್ವಾಮೀಜಿ ರವರ ಪ್ರತಿಮೆ ನಿರ್ಮಿಸಿ ಪ್ಲಾಸ್ಟಿಕ್ ಮುಸುಕು ಹಾಕಿ ವರ್ಷಗಳೇ ಕಳೆದಿದ್ದು, ಲೋಕಾರ್ಪಣೆ ಮಾಡಲು ಇನ್ನೂ ಕಾಲ ಕೂಡಿ ಬಂದಿಲ್ಲ.
ಇನ್ನೂ ಬಸವಣ್ಣನವರು, ಶಿವಕುಮಾರ ಸ್ವಾಮೀಜಿಗಳು ಕುಳಿತ ಭಂಗಿಯಲ್ಲಿದ್ದು, ಅವರವರ ಪ್ರಮುಖ ವಚನಗಳೊಂದಿಗೆ ಸ್ಥಾಪಿಸಲಾಗಿದೆ.
ಇದರ ಜತೆಗೆ ಬಾಲಗಂಗಾಧರ ಸ್ವಾಮೀಜಿ ರವರದ್ದು ನಿಂತಿರುವ ಭಂಗಿಯಲ್ಲಿ ನಿರ್ಮಾಣವಾಗಿದೆ.
ಸುಂದರ ಹಸಿರು ಉದ್ಯಾನವನದ ನಡುವೆ ಕೇಸರಿ ಪ್ಲಾಸ್ಟಿಕ್ ಹೋದಿಕೆಯ ಮೂರ್ತಿಗಳ ಲೋಕಾರ್ಪಣೆ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
Kshetra Samachara
28/04/2022 08:18 pm