ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆ ಕಂಪನಿಗೆ ಜಿಎಸ್ ಟಿ ಉರುಳು!?

ವರದಿ: ಗಣೇಶ್ ಹೆಗಡೆ

ಬೆಂಗಳೂರು: ನಗರದ ಕಸ ನಿರ್ವಹಣೆ ಜವಾಬ್ದಾರಿಯನ್ನು ಸುಸೂತ್ರವಾಗಿ ನಿರ್ವಹಿಸುವ ಉದ್ದೇಶದಿಂದ ಸ್ಥಾಪಿತವಾದ ಘನತ್ಯಾಜ್ಯ ನಿರ್ವಹಣೆ ಕಂಪನಿ ಗೆ ತೆರಿಗೆ ವಿನಾಯಿತಿ ಸಿಗ ದಿದ್ದರೆ ಕಂಪನಿ ವರ್ಷಕ್ಕೆ 180 ಕೋಟಿ ರೂ. ಜಿಎಸ್ ಟಿ ಪಾವತಿ ಮಾಡಬೇಕಿದೆ. ಇದರಿಂದ ಕಂಪನಿಯನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

ಕಳೆದೊಂದು ವರ್ಷದ ಹಿಂದೆ ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಕಂಪನಿಯನ್ನು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿ ಸಹ ಭಾಗಿತ್ವದಲ್ಲಿ ಆರಂಭಿಸಲಾಗಿತ್ತು.

ನಗರದ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಇದೆ. ಹೀಗಾಗಿ ಬಿಬಿಎಂಪಿ ಗೆ ಕಸ ನಿರ್ವಹಣೆ ಮಾಡುವ ವಿಚಾರದಲ್ಲಿ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿರಲಿಲ್ಲ.

ಆದರೆ, ಈಗ ಕಸ ನಿರ್ವಹಣೆ ಜವಾಬ್ದಾರಿಯನ್ನು ಪ್ರಮುಖ ಕಂಪನಿಗೆ ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಕಂಪನಿಗೆ ಈ ಜವಾಬ್ದಾರಿ ನೀಡಿದರೆ 180 ಕೋಟಿ ರೂ.ನಷ್ಟು ಜಿಎಸ್ ಟಿ ಪಾವತಿಸುವ ಸಂಕಟ ಎದುರಾಗಿದೆ. ಹೀಗಾಗಿ ಕಂಪನಿ ಬೇಕೋ, ಬೇಡವೋ ಅಥವಾ ಬೇರೆ ಸ್ವರೂಪದಲ್ಲಿ ಮರು ರಚನೆ ಮಾಡಬೇಕಾ‌ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರ ಗಮನಕ್ಕೆ ಬಂದಿಲ್ಲ ಅಂತಿದ್ದಾರೆ.

Edited By : Manjunath H D
PublicNext

PublicNext

27/04/2022 05:44 pm

Cinque Terre

40.1 K

Cinque Terre

0

ಸಂಬಂಧಿತ ಸುದ್ದಿ