ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಧೂಳಿನ ಸಿಟಿಯಾಗಿದೆ ಗಾರ್ಡನ್ ಸಿಟಿ- ಶೇ30% ಅಲರ್ಜಿ ಕೇಸ್ ಹೆಚ್ಚಳ

ಬೆಂಗಳೂರು : ರಾಜಧಾನಿ ನಿವಾಸಿಗಳಿಗೆ ಈಗ ಧೂಳಿನ ಕಾಟ ಶುರುವಾಗಿದೆ. ಕೋವಿಡ್ ಸೋಂಕಿನಿಂದ ರಕ್ಷಣೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಜನತೆ, ಬೇಸಿಗೆ ಕಾಲದಲ್ಲಿ ಧೂಳಿನ ಬಗ್ಗೆಯೂ ಹೆಚ್ಚು ಗಮನಹರಿಸಬೇಕಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಲವು ಕಾಮಗಾರಿಗಳಿಂದ ನಿತ್ಯ ಒಂದಿಲ್ಲೊಂದು ಸಮಸ್ಯೆ ಉದ್ಭವಿಸುತ್ತಿದೆ. ಅದ್ರಲ್ಲೂ ಅಲರ್ಜಿ ಕೇಸ್ ನಗರದಲ್ಲಿ ಸಾಕಷ್ಟು ಉಲ್ಬಣಿಸಿದೆ.

ಗಾರ್ಡನ್ ಸಿಟಿ ಬೆಂಗಳೂರಿಗೆ ಅಭಿವೃದ್ಧಿ ಮಾರಕವಾಗುತ್ತಿದೆ. ಸ್ಮಾರ್ಟ್‌ ಸಿಟಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸೂಕ್ತ ನಿರ್ವಹಣೆಯಿಲ್ಲದೇ ರಸ್ತೆಗಳೆಲ್ಲವೂ ಧೂಳು ಮಯವಾಗಿ ರೂಪುಗೊಂಡಿವೆ. ಇದರಿಂದ ಜನತೆಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಕೋವಿಡ್ ದಿಂದ ತಾತ್ಕಾಲಿಕವಾಗಿ ಸ್ಥಗಿತ ಗೊಂಡಿದ್ದ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಮತ್ತೆ ತನ್ನ ವೇಗ ಪಡೆದುಕೊಂಡಿವೆ. ನಗರದ ಯಾವುದೇ ಬಡಾವಣೆಗಳತ್ತ ಕಣ್ಣಾಯಿಸಿದರೂ ತಗ್ಗು, ಗುಂಡಿ, ರಸ್ತೆ ಅಗೆತ ಕಣ್ಣಿಗೆ ಗೋಚರಿಸುತ್ತದೆ. ಆಯಕಟ್ಟಿನ ಜಾಗಗಳಲ್ಲಿ ಗುಂಡಿ ತೋಡಿ ವಾರ ಕಳೆದರೂ ಮುಚ್ಚದೇ ಹಾಗೆಯೇ ಬಿಟ್ಟಿರುವ ದೃಶ್ಯ ಕಂಡುಬಂದಿದೆ. ವಾಹನ ಸವಾರರಿಗೆ ಧೂಳಿನಿಂದ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಮೂಗು ಕಟ್ಟುವಿಕೆ, ಉಸಿರಾಟದ ತೊಂದರೆ, ಶೀತ ಹಾಗೂ ಇತರೆ ಅಲರ್ಜಿ ಉಂಟಾಗುತ್ತದೆ. ಹೆಚ್ಚು ಧೂಳಿನ ಕಣ ಸೇವನೆಯಿಂದ ಜ್ವರ, ಅಸ್ತಮಾ ಹಾಗೂ ಚರ್ಮದ ನವೆ (ಇಸಬು) ಉಲ್ಬಣಿಸಬಹುದು. ಮನೆಯಲ್ಲಿ ಕೆಲಸ ಮಾಡುವಾಗ ಬರುತ್ತಿದ್ದ ಈ ಎಲ್ಲಾ ಸಮಸ್ಯೆಗಳು, ಸವಾರರಿಗೂ ವ್ಯಾಪಿಸುತ್ತಿದೆ ಎಂದು ವೈದ್ಯರು ಹೇಳುತ್ತಾರೆ.

ಇನ್ನೂ ನಗರದಲ್ಲಿ ವಾತಾವರಣ ಬದಲಾವಣೆ, ಕಟ್ಟಡ ನಿರ್ಮಾಣದ ಧೂಳಿನಿಂದ ಖಾಲಿ ನಿವೇಶನಗಳಲ್ಲಿ ಉತ್ಪತ್ತಿಯಾಗುವ ಕಳೆಗಳಿಂದ ಶೇ.30% ಅಲರ್ಜಿ ಕೇಸ್ ಹೆಚ್ಚಾಗಿವೆ.

ಇನ್ನೂ ಕಳೆದ ಎರಡು ವರ್ಷದಲ್ಲಿ ಕೊವೀಡ್ ಹಿನ್ನೆಲೆಯಿಂದ ಜನರು ಮಾಸ್ಕ್ ಧರಿಸುತ್ತಿದ್ದರು. ಕಲುಷಿತ ಗಾಳಿಯ ಸೇವೆನೆ ಕಡಿಮೆ ಆಗಿತ್ತು.ಅಲರ್ಜಿ ಪ್ರಕರಣ ಕೂಡಾ ಕಮ್ಮಿ ಇತ್ತು. ಇದೀಗ ಕೊವೀಡ್ ಕಡಿಮೆ ಆಗಿದೆ ಜನರು ಮಾಸ್ಕ್ ಹಾಕೋದನ್ನು ಬಿಟ್ಟಿದ್ದಾರೆ. ಇದು ಕೂಡಾ ಅಲರ್ಜಿ ಹೆಚ್ಚಾಗಲು ಕಾರಣವಾಗ್ತಾಯಿದೆ.

-ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Shivu K
PublicNext

PublicNext

22/04/2022 02:50 pm

Cinque Terre

40.21 K

Cinque Terre

0

ಸಂಬಂಧಿತ ಸುದ್ದಿ