ಬೆಂಗಳೂರು: ನಗರದೆಲ್ಲೆಡೆ ನಿನ್ನೆ ಬುಧವಾರ ಭಾರಿ ಮಳೆಯಿಂದಾಗಿ, ಎಲ್ಲೆಲ್ಲೂ ಚಂಬರ್‌ಗಳು ತೆರೆದುಕೊಂಡಿವೆ. ಹೆಮ್ಮಿಗೆಪುರ ವಾರ್ಡ್‌ನ ಚೆಟ್ಟುಪಾಳ್ಯದಲ್ಲಿ ಚೇಂಬರ್ ತೆರೆದುಕೊಂಡು ಬೆಳಿಗ್ಗೆಯಿಂದಲೂ ಚಂಬರ್ ನೀರು ಹೊರಬರುತ್ತಲೇ ಇದೆ. ಈ ಹಿನ್ನೆಲೆ ವಾಹನ ಸವಾರರು ಪರದಾಡುವಂತಾಗಿದೆ. ಇದರ ಎದುರಲ್ಲೇ ಅಪಾರ್ಟ್‌ಮೆಂಟ್ ಇದೆ. ಅಲ್ಲಿನ ಜನರು ಕೂಡ ವಾಸನೆ ತಾಳಲಾರದೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ರಸ್ತೆ ಪೂರ್ತಿಯೂ ವಾಸನೆ ನೀರಿನಿಂದ ಕೂಡಿದ್ದು, ಬೈಕ್ ಸವಾರರು ಆಯ ತಪ್ಪಿ ಬೀಳಿತ್ತಿದ್ದಾರೆ.
Kshetra Samachara
14/04/2022 06:42 pm