ಬೆಂಗಳೂರು: ಪುಲಿಕೇಶಿ ನಗರ ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರನ್ನು ನಾಮಕರಣ ಮಾಡುವಂತೆ ಕರ್ನಾಟಕ ಬಹುಜನ ಫೆಡರೇಶನ್ ಇಂದು ಕರ್ನಾಟಕ ರಾಜ್ಯಪಾಲರಿಗೆ ಮನವಿ ಮಾಡಿದೆ. ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಪಾಟಂ ರಸ್ತೆ, ಸರ್ಕಾರಿ ಫೆದರ್‌ಲೈಟ್ ಶಾಲೆಯ ತಳಭಾಗದಲ್ಲಿ (ಅಂಡರ್ ಗೌಂಡ್) ಹೊಸದಾಗಿ ನಿರ್ಮಾಣವಾಗುತ್ತಿರುವ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ಕರ್ನಾಟರ ರತ್ನ,ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರವರ ಹೆಸರನ್ನು ನಾಮಕರಣ ಮಾಡಲು ಮನವಿ.
ಸದರಿ ನಿಲ್ದಾಣಕ್ಕೆ ಕರುನಾಡ ಹೆಮ್ಮೆಯ ಪುತ್ರ, ಜನ ಮೆಚ್ಚುಗೆ ಪಡೆದು ಅಪ್ಪು ಎಂದು ಪ್ರಖ್ಯಾತಿ ಹೊಂದಿದ ಪುನೀತ್ ರಾಜ್ ಕುಮಾರ್ ರವರ ಹೆಸರನ್ನು ನಾಮಕರಣ ಮಾಡಬೇಕೆಂದು ಈ ಭಾಗದ ಜನರ ಒತ್ತಾಯವಾಗಿದೆ. ಪುನೀತ್ ರಾಜ್‌ಕುಮಾರ್ ರವರು ಹಲವಾರು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಆಕಾಲಿಕ ಮರಣಕ್ಕೆ ತುತ್ತಾಗಿರುವುದು ರಾಜ್ಯದ ಜನರಲ್ಲದೆ ಬೇರೆ ಬೇರೆ ಭಾಗದ ಜನರಿಗೂ ಸಹ ನುಂಗಲಾರದ ತುತ್ತಾಗಿದೆ. ಪುನೀತ್ ರಾಜ್‌ಕುಮಾರ್ ರವರ ಮರಣ ನಂತರದಲ್ಲಿ ಅವರು ಮಾಡಿರುವ ದೀನ ದಲಿತರು, ಅನಾಥರಿಗೆ ಮಾಡಿರುವ ಸೇವೆ ಹಾಗೂ ಸಮಾಜಮುಖಿ ಸೇವೆಯನ್ನು ಕಂಡು ಜನರು ಮೂಕವಿಸ್ಮಿತರಾಗಿದ್ದಾರೆ.
ಆದ್ದರಿಂದ ಕನ್ನಡ ಭಾಷೆ, ನೆಲ, ಜಲ ಹಾಗೂ ಕರುನಾಡಿಗೆ, ದೀನ ದಲಿತರಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಪುನೀತ್ ರಾಜ್‌ಕುಮಾರ್ ರವರ ಹೆಸರನ್ನು ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಬಾಟಂ ರಸ್ತೆ, ಹೊಸದಾಗಿ ನಿರ್ಮಾಣವಾಗುತ್ತಿರುವ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ನಾಮಕರಣ ಮಾಡಿ ಜನರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
05/04/2022 04:33 pm