ಬೆಂಗಳೂರು: ಕೊರೊನಾದ ಮೂರನೇ ಅಲೆಯಿಂದ ತತ್ತರಿಸಿದ ಖಾಸಗಿ ಪ್ರವಾಸಿ ವಾಹನಗಳು, ಕ್ಯಾಬ್, ಟಾಕ್ಸಿಗಳಿಗೆ ಬಾಡಿಗೆ ಇಲ್ಲದೇ ಎರಡು ವರ್ಷಗಳಿಂದ ನಷ್ಟ ಅನುಭವಿಸಿದ್ರು. ಈ ಬೆನ್ನಲ್ಲೇ ಉದ್ಯಮಕ್ಕೆ ಇಂಧನ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದ್ರಿಂದ ಲೋನ್ ಕಟ್ಟಲಾಗದೆ, ಸಾಲ ತೀರಿಸಲಾಗದೆ ಟ್ಯಾಕ್ಸಿ ಹಾಗೂ ಕ್ಯಾಬ್ ಚಾಳಕರು ನಷ್ಟದಲ್ಲಿದ್ದಾರೆ. ತೈಲದ ಬೆಲೆ ಏರಿಕೆಯಂತೂ ತಲೆ ಬಿಸಿಯಾಗಿದೆ. ಹೀಗಾಗಿ ದರ ಪರಿಷ್ಕರಣೆ ಮಾಡ್ತೇವೆ, ಕಿಲೋ ಮೀಟರ್ ಗೆ 2-3 ರೂ ಏರಿಕೆ ಮಾಡಬೇಕಾಗುತ್ತದೆ. ನಮಗೂ ಪರ್ಯಾಯ ಮಾರ್ಗ ಇಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಕಂಪನಿಗಳಿಗೆ ಅಟಾಚ್ ಮಾಡುವಾಗಲೇ ಹೆಚ್ಚು ಮಾಡ್ತೇವೆ, ದಿನ ನಿತ್ಯ ತೈಲದ ಬೆಲೆ ಏರಿಕೆಯಾಗುತ್ತಿದ್ದರೆ, ನಾವು ನಿಗದಿತ ಬೆಲೆಗೆ ಕೆಲಸ ಮಾಡುವುದಕ್ಕೆ ಆಗೋದಿಲ್ಲ. ನಾವು ಕೂಡ ಬೆಲೆ ಏರಿಕೆ ಮಾಡುವುದೊಂದೇ ಉಳಿದಿರುವ ದಾರಿ. ತೈಲ ಬೆಲೆ ಏರಿಕೆಯಿಂದ ಟಾಕ್ಸಿ ಪ್ರಯಾಣ ದರ ಪರಿಷ್ಕರಣೆ ಮಾಡುವುದಕ್ಕೆ ಮುಂದಾಗಿದ್ದಾರೆ ಕರ್ನಾಟಕ ಟ್ರಾವೆಲ್ಸ್ ಮಾಲೀಕರುಗಳು.
PublicNext
04/04/2022 07:54 pm