ಯಲಹಂಕ: ಹಿಂದುಳಿದ ಪಂಗಡಗಳ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಸಹಾಯ ಯೋಜನೆ ಅನುದಾನದಲ್ಲಿ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಇಂದು ಯಲಹಂಕದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರ ಸ್ತ್ರೀ ಶಕ್ತಿಗುಂಪುಗಳ ಮೂಲಕ ಮಹಿಳೆಯರ ಅಭಿವೃದ್ಧಿಗೆ ಮುಂದಾಗಿದೆ. ಗೃಹ ಕೆಲಸಗಳ ಜೊತೆಗೆ ಮಹಿಳೆಯರು ಆರ್ಥಿಕ ಸದೃಢತೆಗೆ ಮುಂದಾಗಿ ಹೊಲಿಗೆ ತರಬೇತಿ ಪಡೆಯಲು ಯೋಜನೆ ರೂಪಿಸಿದೆ. ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳನ್ನು ಗುರ್ತಿಸಿ ವಿಶ್ವವಾಣಿ ಫೌಂಡೇಷನ್ 90 ದಿನಗಳ ಟೈಲರಿಂಗ್ ತರಬೇತಿ ನೀಡಿದೆ.
ತರಬೇತಿ ಪಡೆದ ಅರ್ಹ ಫಲಾನುಭವಿಗಳಿಗೆ ಇಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವತಿಯಿಂದ ಟೈಲರಿಂಗ್ ಯಂತ್ರೋಪಕರಣ ವಿತರಿಸಲಾಯಿತು. 2021-22 ರ ಸಾಲಿನಲ್ಲು 54 ಜನ S.T ಸಮೂದಾಯದ ಅರ್ಹ ಫಲಾನುಭವಿಗಳು ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಹೊಲಿಗೆ ಯಂತ್ರ ಸ್ವೀಕರಿಸಿದರು. ಸ್ತ್ರೀಶಕ್ತಿ ಗುಂಪುಗಳಿಗೆ ಸರ್ಕಾರ ಹೆಚ್ಚಿನ ಮೂಲ ಸೌಲಭ್ಯ ಒದಗಿಸಿದರೆ, ಹಿಂದುಳಿದ ಪಂಗಡಗಳ ಮಹಿಳೆಯರ ಅಭಿವೃದ್ಧಿ ಸಾಧ್ಯ ಎಂದು ಮಹಿಳಾ ಮುಖಂಡರು ಅಭಿಮತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ಫಲಾನುಭವಿಗಳು ಸರ್ಕಾರಕ್ಕೆ ಧನ್ಯವಾದ ಸಮರ್ಪಿಸಿದರು.
Kshetra Samachara
04/04/2022 03:18 pm