ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಶೆಟ್ಟಿಹಳ್ಳಿ ರೈಲ್ವೆ ಮೇಲ್ಸೇತುವೆಯ ಬಳಿ ಅಪಾಯಕಾರಿ ಹಳ್ಳ

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರೈಲ್ವೆ ಮೇಲ್ಸೇತುವೆಯ ಸರ್ವಿಸ್ ರಸ್ತೆಯಲ್ಲಿ ಅಪಾಯಕಾರಿ ಹಳ್ಳವೊಂದು ಬಾಯ್ದೆರೆದಿದೆ. ವಾಹನ ಸವಾರರ ಬಲಿಗಾಗಿ ಕಾದಿರುವ ಹಳ್ಳವನ್ನ ಮುಚ್ಚಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ್ದಾರೆ. ತಕ್ಷಣವೇ ಹಳ್ಳ ಮುಚ್ಚದಿದ್ದರೆ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆಯನ್ನ ಸ್ಥಳೀಯರು ನೀಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು, ಕೈಗಾರಿಕಾ ಪ್ರದೇಶದ ಮೂಲಕ ರಾಜ್ಯ ಹೆದ್ದಾರಿ 9ರ ಯಲಹಂಕ- ಹಿಂದೂಪುರ ರಸ್ತೆ ಹಾದು ಹೋಗಿದೆ. ಹೆದ್ದಾರಿಗೆ ಅಡ್ಡವಾಗಿ ರೈಲ್ವೆ ಟ್ರ್ಯಾಕ್ ಹಾದು ಹೋಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಮೇಲ್ಸೇತುವೆ ಪಕ್ಕದಲ್ಲಿಯೇ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕಿಸುವ ಜಾಗದಲ್ಲಿ ದೊಡ್ಡ ಹಳ್ಳ ನಿರ್ಮಾಣವಾಗಿದೆ. ವಾಹನ ಸವಾರರ ಬಲಿಯಾಗಿಯೇ ಬಾಯ್ದೆರೆದಿರುವ ಹಳ್ಳ ಈಗಾಗಲೇ ಹಲವರ ಬಲಿ ತೆಗೆದುಕೊಂಡಿದೆ.

ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಮೇಲ್ಸೇತುವೆಯ ತಡೆಗೋಡೆ ಕುಸಿದು ಬಿದ್ದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಿರುವ ಇಂಜಿನಿಯರ್‌ಗಳ ಬುದ್ಧಿವಂತಿಕೆಯನ್ನು ಪ್ರಶ್ನೆ ಮಾಡುವಂತಿದೆ. ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕಿಸುವ ಜಾಗ ಮೊದಲೇ ಅಪಾಯಕಾರಿಯಾಗಿದೆ. ಇದರ ನಡುವೆ ಇದೇ ಜಾಗದಲ್ಲಿ ಹಳ್ಳ ಸಹ ಇದೆ. ಸರ್ವಿಸ್ ರಸ್ತೆಯನ್ನು ಆಕ್ರಮಿಸಿಕೊಂಡು ವಾಣಿಜ್ಯ ಮಳಿಗೆಗಳನ್ನ ತೆರೆಯಲಾಗಿದ್ದು, ಇದರಿಂದ ಸರ್ವಿಸ್ ರಸ್ತೆ ಬಂದ್ ಆಗಿದೆ. ಸರ್ವಿಸ್ ರಸ್ತೆಯಿಂದ ಬಂದು ಹೆದ್ದಾರಿಗೆ ಬರುವಾಗ ಇಕ್ಕಾಟಾದ ಸ್ಥಳವಿದ್ದು ಅಪಘಾತಕ್ಕೂ ಕಾರಣವಾಗಿದೆ.

ಹಳ್ಳ ಮುಚ್ಚುವಂತೆ ಜಿಲ್ಲಾಧಿಕಾರಿಗಳು, ಕೆಆರ್ ಡಿಸಿಎಲ್, ರೈಲ್ವೆ ಅಧಿಕಾರಿಗಳು ಮತ್ತು ಟೋಲ್ ಕಂಪನಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ ಹಳ್ಳ ಮುಚ್ಚಿ ರಸ್ತೆ ದುರಸ್ತಿ ಮಾಡುವ ಕೆಲಸ ನಮ್ಮದಲ್ಲವೆಂಬ ಉದಾಸೀನತೆ ತೋರಿಸಿ ತಮ್ಮ ಜವಾಬ್ದಾರಿಯನ್ನ ಮತ್ತೊಬ್ಬರ ಹೆಗಲಿಗೆ ಹಾಕುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯತೆಗೆ ಬೇಸತ್ತಿರುವ ಜನರು ಹೆದ್ದಾರಿಗೆ ಮಣ್ಣು ಸುರಿದು ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

31/03/2022 07:57 am

Cinque Terre

2.98 K

Cinque Terre

0

ಸಂಬಂಧಿತ ಸುದ್ದಿ