ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ವಚ್ಛ ಬೆಂಗಳೂರು ಮಾಡಲು ಬಿಬಿಎಂಪಿಗೆ ಸ್ಥಳೀಯರ ಸಾಥ್ !

ಬೆಂಗಳೂರು: ಕಸ ಮುಕ್ತ ಬೆಂಗಳೂರು ಮಾಡಲು BBMP ಈಗ ಮತ್ತೆ ಕಾರ್ಯಪ್ರವೃತ್ತವಾಗಿದೆ.ಇಂದು ಬಿಟಿಎಂ ಲೇಔಟ್‌ನಲ್ಲಿರುವ ಕಸದ ಜಾಗವನ್ನ ಸ್ವಚ್ಛಗೊಳಿಸಲು ಬಿಬಿಎಂಪಿ ಸಿಬ್ಬಂದಿಗೆ ಸ್ಥಳೀಯ ನಿವಾಸಿಗಳು ಕೈಜೋಡಿಸಿದರು.

ಬಿಟಿಎಂ ಲೇಔಟ್ 2ನೇ ಹಂತ 29ನೇ ಮುಖ್ಯರಸ್ತೆ ಕಸದ ಸಮಸ್ಯೆ ಹಲವು ವರ್ಷಗಳಿಂದ ಇತ್ತು.ರಾತ್ರಿ ವೇಳೆ ಅನೇಕರು ಈ ರಸ್ತೆಯಲ್ಲಿ ಕಸ ಎಸೆಯುತ್ತಿದ್ದು, ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಬಿಬಿಎಂಪಿ ಹಾಗೂ ಸ್ಥಳೀಯ ನಿವಾಸಿಗಳು ಸೇರಿ ಕಸವನ್ನು ಸ್ವಚ್ಛಗೊಳಿಸಿದರು.

ಬಿಟಿಎಂ ಲೇಔಟ್ ನಿವಾಸಿಗಳು ಮತ್ತು ಬಿಬಿಎಂಪಿ ಸಿಬ್ಬಂದಿ ಕೈಜೋಡಿಸಿ ಈಗ ವಾರ್ಡ್ ಅನ್ನು ಕಸ ಮುಕ್ತಗೊಳಿಸುತ್ತಿದ್ದಾರೆ.

-ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Shivu K
PublicNext

PublicNext

27/03/2022 03:58 pm

Cinque Terre

27.88 K

Cinque Terre

1

ಸಂಬಂಧಿತ ಸುದ್ದಿ