ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಕಾರಾಸನಿ ನಿಗಮದಿಂದ 600 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಬಸ್ ಸ್ಟಾಪ್ ಗಳಲ್ಲು ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ , ಕುಕ್ಕೆಸುಬ್ರಮಣ್ಯ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳಿ, ಧಾರವಾಡ ಮುಂತಾದ ಕಡೆಗೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರ್ ರಸ್ತೆ ಬಸ್ ನಿಲ್ದಾಣದಿಂದಲೂ ಮೈಸೂರ್, ಕುಶಾಲನಗರ, ಮಡಿಕೇರಿ ಸುತ್ತ-ಮುತ್ತಾ ಬಸ್‌ಗಳು ಇರುತ್ತವೆ.
ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಟಿಕೆಟ್ ಬುಕ್ಕಿಂಗ್ ಮಾಡಲು www.ksrtc.karnataka.gov.in ವೆಬ್ ಸೈಟ್ ನಾ ಬಳಸಿಕೊಳ್ಳಬಹುದು.ಹಾಯಾಗಿ ನಿಮ್ಮ ನಿಮ್ಮ ಊರುಗಳಿಗೆ ಮುಂದಾಗಿ ತಲುಪಬಹುದು.
Kshetra Samachara
26/03/2022 05:59 pm