ಬೆಂಗಳೂರು: ಪ್ರತಿದಿನ ಸಾವಿರಾರು ವಾಹನಗಳು ಹಾಗೂ ಹತ್ತಾರು ಸಾವಿರು ಜನರು ಓಡಾಡುವ ರಸ್ತೆಯಲ್ಲಿ ರೈಲ್ವೇ ಗೇಟ್ ಇರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಟ್ರಾಫಿಕ್ ಜಾಮ್‌ನಿಂದ ಹೈರಾಣಾಗುತ್ತಿದ್ದಾರೆ.
ಹೌದು. ಕೆಆರ್ ಪುರದ ವಿಜ್ಞಾನ ನಗರ ವಾರ್ಡನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಖ್ಯರಸ್ತೆಯಲ್ಲಿ ರೈಲ್ವೇ ಗೇಟ್‌ನಿಂದ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮೂವತ್ತೆರಡು ಕೋಟಿ ವೆಚ್ಚದ ಕಾಮಗಾರಿಯ ಯೋಜನೆ ರೂಪಿಸಲಾಗಿತ್ತು. ಆದರೆ ಆ ಯೋಜನೆ ಅನುಮತಿ ಸಿಕ್ಕರೂ ಸಹ ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸಹ ಇದೇ ರಸ್ತೆಯ ಮೂಲಕ ಶಾಲೆಗೆ ತೆರಬೇಕಾಗಿದೆ. ರೈಲ್ವೆ ಗೇಟ್ ಹಾಕಿದರೆ ಸರಿ ಸುಮಾರು ಅರ್ಧ ಕಾಯಬೇಕಾಗುತ್ತೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಟ್ರಾಫಿಕ್ ಸಮಸ್ಯೆಯಿಂದ ಬಸ್ ಬಾರದೆ ಪ್ರತಿ ದಿನ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ ವಿದ್ಯಾರ್ಥಿಗಳು ತಿಳಿಸಿದರು.
PublicNext
24/03/2022 10:52 pm