ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉಪಯೋಗಕ್ಕೆ ಬಾರದ ಸಾರ್ವಜನಿಕ ಶೌಚಾಲಯ : ಅನೈತಿಕ ಚಟುವಟಿಕೆಗಳ ತಾಣ

ಆನೇಕಲ್ : ಆನೇಕಲ್ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಕಳೆದ ಎರಡು ವರ್ಷಗಳ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಾಣ ಮಾಡಲಾಗಿತ್ತು.

ಈ ರೀತಿ ಲಕ್ಷ ಲಕ್ಷ ಖರ್ಚು ಮಾಡಿ ಕಟ್ಟಿಸಿದ ಶೌಚಾಲಯ ಈಗ ಉಪಯೋಗಕ್ಕೆ ಬಾರದಂತ್ತಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.

ಹೌದು ಆನೇಕಲ್ ಪಟ್ಟಣದ ತಿಲಕ್ ನಗರ ಬಳಿಯಿರುವ ಸಾರ್ವಜನಿಕ ಶೌಚಾಲಯ ಹಾಗೂ ಸಂತೆ ಬೀದಿಯಲ್ಲಿ ಇರುವ ಜಾಗದಲ್ಲಿ ಶೌಚಾಲಯ ಉಪಯೋಗಕ್ಕೆ ಬಾರದೆ ನೆನೆಗುದಿಗೆ ಬಿದ್ದಿವೆ.

ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ನಾಗಾರಾಜು ಕಳೆದ ಎರಡು ವರ್ಷಗಳ ಹಿಂದೆ ಉದ್ಘಾಟನೆ ಮಾಡಿದರು ಅದನ್ನ ಸಾರ್ವಜನಿಕರು ಉಪಯೋಗ ಮಾಡುತ್ತಿಲ್ಲ. ಪುರಸಭೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಕೊಟ್ಟು ಅವರೇ ಬೀಗ ಹಾಕಿ ಇಟ್ಕೋಕೊಳ್ಳುತ್ತಿದ್ದಾರೆ. ಇನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದು, ಸಾರ್ವಜನಿಕರ ಅನುಕೂಲಕ್ಕೆ ಬಾರದೆ ಇರುವುದು ಮಾತ್ರ ವಿಪರ್ಯಾಸ.

ಒಟ್ಟಾರೆಯಲ್ಲಿ ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜಾಣ ಕರುಡತನ ಎದ್ದು ಕಾಣುತ್ತಿದೆ. ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Nagesh Gaonkar
PublicNext

PublicNext

17/03/2022 05:07 pm

Cinque Terre

23.84 K

Cinque Terre

0

ಸಂಬಂಧಿತ ಸುದ್ದಿ