ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳಾ ಆಸನಗಳ ಮೇಲೆ ಕುಳಿತ ಪುರುಷರಿಗೆ ದಂಡ;ಬಿಎಂಟಿಸಿ ಸಂಗ್ರಹಿಸಿದ್ದು ಎಷ್ಟು ಗೊತ್ತೇ ?

ಬೆಂಗಳೂರು: ಬಸ್‌ ಗಳಲ್ಲಿ ಮಹಿಳೆಯರಿಗಾಗಿಯೇ ಆಸನಗಳನ್ನ ಮೀಸಲಿಡಲಾಗುತ್ತದೆ. ಈ ಸೀಟ್‌ಗಳ ಮೇಲೆ ಕುಳಿತ ಪುರುಷರಿಗೆ ದಂಡವನ್ನೂ ವಿಧಿಸಲಾಗುತ್ತದೆ. ಆ ಲೆಕ್ಕದಂತೆ 2021 ರಲ್ಲಿ ಬಿಎಂಟಿಸಿ ಎಷ್ಟು ದಂಡ ವಸೂಲಿ ಮಾಡಿದೆ ಗೊತ್ತೆ ? ಬನ್ನಿ, ಹೇಳ್ತೀವಿ.

ಹೌದು. ಬರೋಬ್ಬರಿ 1,00,300 ರಷ್ಟು ದಂಡವನ್ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಗ್ರಹಿಸಿದೆ. ಇದು ಮಹಿಳೆಯರಿಗೆ ಮೀಸಲಿಟ್ಟ ಸೀಟಿನ ಕಥೆ ಆಯಿತು. ಆದರೆ ಟಿಕೆಟ್ ಪಡೆಯದೆ ಪ್ರಯಾಣಿಸೋರಿಂದಲೂ ಬಿಎಂಟಿಸಿ ದಂಡ ವಸೂಲಿ ಮಾಡಿದೆ. ಅದರ ಲೆಕ್ಕವೂ ದೊಡ್ಡದೇ ಇದೆ.39,78,638 ರಷ್ಟು ದಂಡ ವಸೂಲಿ ಮಾಡಿದೆ.

2022 ಜನವರಿಯ ಲೆಕ್ಕವನ್ನ ಹೇಳೋದಾದ್ರೆ, ಬೆಂಗಳೂರಿನ ಸುತ್ತ-ಮುತ್ತಲಿನ ಬಸ್ ಗಳನ್ನ ಪರಿಶೀಲಿಸಿದ ನಿಗಮ ತಪಾಸಣಾ ಸಿಬ್ಬಂದಿ ಬರೋಬ್ಬರಿ,2,511 ಪ್ರಯಾಣಿಕರಿಂದ 4,08,305 ವಸೂಲಿ ಮಾಡಿದೆ.

Edited By :
PublicNext

PublicNext

26/02/2022 04:13 pm

Cinque Terre

18.25 K

Cinque Terre

0

ಸಂಬಂಧಿತ ಸುದ್ದಿ