ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅವೆನ್ಯೂ ರಸ್ತೆ ಸ್ಮಾಟ್೯ ಸಿಟಿ ಕಾಮಗಾರಿ ಪರಿವೀಕ್ಷಣೆ

ಬೆಂಗಳೂರು:ನಗರದ ಅವೆನ್ಯೂ ರಸ್ತೆ ಮೈಸೂರು ಬ್ಯಾಂಕ್ ವೃತ್ತದಿಂದ ಎಸ್ ಜೆ ಪಿ ರಸ್ತೆಯನ್ನು ಸಂಪರ್ಕಿಸುವ ಸುಮಾರು 1.02 ಕಿ.ಮೀ ಉದ್ದ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಯನ್ನು ಮಾನ್ಯ ಆಡಳಿತಗಾರರು ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಅಧ್ಯಕ್ಷರಾದ ರಾಕೇಶ್ ಸಿಂಗ್ ರವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಅವೆನ್ಯೂ ರಸ್ತೆಯ ಕಾಮಗಾರಿಯಲ್ಲಿ ಬೆಂಗಳೂರು ನೀರು ಸರಬರಾಜು ಮಂಡಳಿಯವರ ಕೋರಿಕೆಯಂತೆ ರಸ್ತೆಯ ಎರಡೂ ಬದಿಗಳಿಗೆ ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸಬೇಕಾಗಿದ್ದು, ನಂತರ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕಾಗಿದೆ. ಅದನ್ನು ಕೂಡಲೆ ಪೂರ್ಣಗೊಳಿಸಿ ಮಾರ್ಚ್ ಅಂತ್ಯದೊಳಗೆ ಕಾಮಗಾರಿಗಳನ್ನು ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಸಾರ್ವಜನಿಕರ ಓಡಾಟಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಹಗಲು ರಾತ್ರಿ ಕೆಲಸ ನಿರ್ವಹಿಸಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಸೂಚನೆ ನೀಡಿ, ಸ್ಥಳೀಯ ವರ್ತಕರೊಂದಿಗೆ ಚರ್ಚೆ ನಡೆಸಿದರು.

ಅವೆನ್ಯೂ ರಸ್ತೆಯ ದೊಡ್ಡಪೇಟೆ ವೃತ್ತದ ಸೌಂದರೀಕರಣ, ಫೈರ್ ಫೈಟಿಂಗ್ ಪಾಯಿಂಟ್ ಗಳ ಸ್ಥಾಪನೆ, ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಪಾದಚಾರಿ ಮಾರ್ಗದ ಅಭಿವೃದ್ಧಿ ಸೇರಿದಂತೆ ಇನ್ನಿತರೆ ವಿಷಯಗಳ‌ ಬಗ್ಗೆ ಸ್ಥಳೀಯ ವರ್ತಕರು ಮಾಹಿತಿ ನೀಡಿದರು.‌ ಆಡಳಿತಗಾರರು ತಕ್ಷಣ ಈ ಮನವಿಗೆ ಸ್ಪಂದಿಸಿ ಕೂಡಲೇ‌ ಅಗತ್ಯ ಕ್ರಮಗಳನ್ನು ಕೈಗೊಳ್ಳವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.

Edited By :
Kshetra Samachara

Kshetra Samachara

24/02/2022 06:20 pm

Cinque Terre

658

Cinque Terre

0

ಸಂಬಂಧಿತ ಸುದ್ದಿ