ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾದೇವಪುರ: 2 ವರ್ಷ ಬಳಿಕ ʼಮುನ್ನೇಕೊಳಲಿʼಗೆ ಬಿಎಂಟಿಸಿ ಯಾನಾರಂಭ

ಮಹಾದೇವಪುರ: ಮಹಾದೇವಪುರ ಕ್ಷೇತ್ರದ ಮುನ್ನೇಕೊಳಲು ಗ್ರಾಮಕ್ಕೆ ಸುಮಾರು 2 ವರ್ಷಗಳಿಂದ ಸ್ಥಗಿತವಾಗಿದ್ದ ಬಿಎಂಟಿಸಿ ಬಸ್ ಸಂಚಾರವನ್ನು ಇಂದು‌ ಪುನಾರಂಭಗೊಳಿಸಲಾಯಿತು.

ಹಗದೂರು ವಾರ್ಡಿನ ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್ ನೇತೃತ್ವದಲ್ಲಿ ಬಸ್ ಸಂಚಾರ ಆರಂಭಕ್ಕೆ ಬಿಎಂಟಿಸಿ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅದರಂತೆ ಬಿಎಂಟಿಸಿ ಅಧಿಕಾರಿಗಳು ಇಂದು ಮುನ್ನೇಕೊಳಲು ಗ್ರಾಮದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್, ಮುನ್ನೇಕೊಳಲು ಗ್ರಾಮಸ್ಥರು, ಬಿಎಂಟಿಸಿ ಅಧಿಕಾರಿಗಳು ಮುನ್ನೇಕೊಳಲಿನಿಂದ ಕೆಂಪೇಗೌಡ ಬಸ್ ನಿಲ್ದಾಣ ಮಾರ್ಗದ ಬಸ್ ನಲ್ಲಿ ಸಂಚರಿಸಿದರು.

Edited By :
Kshetra Samachara

Kshetra Samachara

15/02/2022 09:13 pm

Cinque Terre

652

Cinque Terre

0

ಸಂಬಂಧಿತ ಸುದ್ದಿ