ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಕಾರಿ ಭೂಮಿ ಉಳಿಸುವಂತೆ ಸಂಘಟನೆಗಳಿಂದ ಪ್ರತಿಭಟನೆ

ಬೆಂಗಳೂರು: ಸರ್ಕಾರಿ ಭೂಮಿಯನ್ನು ಉಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ರಾಮಗೊಂಡನಹಳ್ಳಿ ಗ್ರಾಮಸ್ಥರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಕೆಆರ್ ಪುರಂ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವೇಣುಗೋಪಾಲ ಅವರು ಬೆಂಗಳೂರು ತಾಲ್ಲೂಕಿನ ರಾಮಗೊಂಡನಹಳ್ಳಿಯ ಸರ್ವೇ ನಂ, 105 ಮತ್ತು 106 ರಲ್ಲಿ 60 ಎಕರೆ ಸರ್ಕಾರಿ ಜಮೀನಿದ್ದು, ಅದರಲ್ಲಿ 40 ಎಕರೆ ಸರ್ಕಾರಕ್ಕೆ ಬೋಗಸ್ ದಾಖಲೆ ಒದಗಿಸಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.

ವರ್ತೂರು ಹೋಬಳಿಯ ರಾಮಗೊಂಡನಹಳ್ಳಿ ಸರ್ವೆ ನಂಬರ್105 ರಲ್ಲಿ ಗ್ರಾಮಕ್ಕೆ ಸೇರಿದ 6 ಎಕರೆ 27ಗುಂಟೆ ಸರ್ಕಾರಿ ಭೂಮಿಯಿದ್ದು ಅದನ್ನು ಗ್ರಾಮದ ಕ್ಷೇಮಾಭಿವೃದ್ಧಿ ಸಂಘಕ್ಕೆ, ಶಾಲೆಯ ನಿರ್ಮಾಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಉದ್ಯಾನವನಕ್ಕೆ ಮೀಸಲಿಡುವಂತೆ ಒತ್ತಾಯಿಸಿದರು.

ಇದೇ ವೇಳೆ ಸೋರಹುಣಸೆ ಎನ್.ವೆಂಕಟೇಶ್ ಮಾತನಾಡಿ ಬೆಂಗಳೂರು ಪೂರ್ವ ತಾಲೂಕು ಉಪ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು...

Edited By : Manjunath H D
Kshetra Samachara

Kshetra Samachara

17/01/2022 05:33 pm

Cinque Terre

1.23 K

Cinque Terre

0

ಸಂಬಂಧಿತ ಸುದ್ದಿ