ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯ ಭಟ್ಟರಹಳ್ಳಿ ಆರ್ ಟಿಒ ಕಚೇರಿ ಸಮೀಪದ ರಾಜಕಾಲುವೆ ಸರಿಯಾದ ನಿರ್ವಹಣೆವಿಲ್ಲದೆ ಕಸ ಸಹಿತ ನಾನಾ ತ್ಯಾಜ್ಯ, ಕೆಸರಿನಿಂದ ಆವೃತಗೊಂಡಿದ್ದರ ಪರಿಣಾಮ ಪರಿಸರ ದುರ್ಗಂಧಮಯದಿಂದ ಕೂಡಿದ್ದು, ಉಸಿರಾಡಲೂ ಕಷ್ಟ ಪಡುವಂತಾಗಿದೆ.
ಸಮೀಪದಲ್ಲಿ ಹತ್ತಾರು ಬೀದಿ ಬದಿ ವ್ಯಾಪಾರಿಗಳು ಸಣ್ಣಪುಟ್ಟ ಅಂಗಡಿ-ಹೋಟೆಲ್ ವ್ಯಾಪಾರ ನಡೆಸುತ್ತಿದ್ದಾರೆ.
ಹೀಗೆ ಹೋಟಲ್ ಗಳಲ್ಲಿ ಉಳಿದ ಆಹಾರ ಪದಾರ್ಥ, ಪ್ಲಾಸ್ಟಿಕ್ ವಸ್ತುಗಳನ್ನು ರಾಜರೋಷವಾಗಿ ರಾಜಕಾಲುವೆಗೇ ಬಿಸಾಡುತ್ತಿದ್ದಾರೆ. ಹತ್ತಿರದಲ್ಲೇ ಆರ್ ಟಿಒ ಕಚೇರಿ, ಇಂದಿರಾ ಕ್ಯಾಂಟೀನ್ ಸಹ ಇದ್ದು, ಕಾಲುವೆಯಲ್ಲಿ ಸೇರಿರುವ ತ್ಯಾಜ್ಯದಿಂದ ದುರ್ನಾತ ಹೊರಹೊಮ್ಮುತ್ತಿದೆ. ಕಳೆದ ಡಿಸೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ನಗರದ ಬಹುತೇಕ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯದೆ ಹಲವು ಅವಾಂತರ ಸೃಷ್ಟಿಸಿತ್ತು. ಇಷ್ಟಾದರೂ ರಾಜಕಾಲುವೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ದುರಂತವೇ ಸರಿ.
Kshetra Samachara
12/01/2022 09:55 pm