ಬೆಂಗಳೂರು: ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರತಿ ದಿಂದ ಕಣ್ಣೂರಿಗೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ವಾಹನಗಳಿನ ಕಸವನ್ನು ಪೌರ ಕಾರ್ಮಿಕರು ರಸ್ತೆಯಲ್ಲಿ ಕಸ ವಿಂಗಡಣೆ ಘಟಕವನ್ನು
ನಿರ್ಮಾಣಿಸಿದ್ದಾರೆ. ಅಲ್ಲದೆ ವಿಂಗಡಣೆಗಾಗಿ ರಸ್ತೆರಲ್ಲಿ ಬೃಹತ್ ವಾಹನಗಳ ನಿಲ್ಲಿಸಿ ಘನ , ಹಸಿ ತ್ಯಾಜ್ಯವನ್ನು ಬೇರ್ಪಡಿಸುತ್ತಿದ್ದಾರೆ.
ಇದರಿಂದ ರಸ್ತೆಯಲ್ಲಿ ದುರ್ನಾತ ಹಬ್ಬುತ್ತಿದ್ದು ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟುಮಾಡಿತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಲ್ಪಿಸುವ ಕಣ್ಣೂರು ಹಾಗೂ ನಗರದ ಹೆಣ್ಣೂರು ರಸ್ತೆಗೆ ಸೇರುವುದರಿಂದ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುವುದರಿಂದ ಕಸ ವಿಂಗಡಣೆಯಿಂದ ವಾಹನ ಸಾವರಾರಿಗೆ ಸಮಸ್ಯೆ ಉಂಟಾಗುತ್ತಿದೆ.
Kshetra Samachara
12/01/2022 01:02 pm