ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಟ್ರಾಫಿಕ್ ಕಿರಿಕ್‌ ಗೆ ಕೊಕ್ ; 270 ಕೋಟಿ ವೆಚ್ಚದ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

ಯಲಹಂಕ: ಬೆಂಗಳೂರು- ದೇವನಹಳ್ಳಿಯ ಕೆಂಪೇಗೌಡ ಇಂಟರ್‌ ನೇಷನಲ್ ಏರ್‌ ಪೋರ್ಟ್ ನ ಸಂಪರ್ಕ ಕೊಂಡಿ ಯಲಹಂಕ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ಟ್ರಾಫಿಕ್ ಜಾಮ್ ಕಿರಿಕಿರಿ‌ ಜನರನ್ನು ಕಾಡುತ್ತಿತ್ತು.

ಯಲಹಂಕ ಪೊಲೀಸ್ ಸ್ಟೇಷನ್ ಸರ್ಕಲ್, NES ಸಿಗ್ನಲ್, ಕೆಂಪೇಗೌಡ ಸರ್ಕಲ್, ಕೋಗಿಲು ಸರ್ಕಲ್, ಸಂದೀಪ್ ಉನ್ನಿಕೃಷ್ಣನ್ ಸರ್ಕಲ್ ಗಳಲ್ಲಿನ ಟ್ರಾಫಿಕ್ ಜಾಮ್ ನಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದರು. ಆದರೆ, ಇದೀಗ ಟ್ರಾಫಿಕ್ ಜಾಮ್ ಗೆ ಮುಕ್ತಿ ನೀಡುವ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಯಲಹಂಕ ಠಾಣೆ ಸರ್ಕಲ್ ನಿಂದ ದೊಡ್ಡಬಳ್ಳಾಪುರ ರಸ್ತೆಯ ಸಂದೀಪ್ ಉನ್ನಿಕೃಷ್ಣನ್ ಸರ್ಕಲ್ ವರೆಗೆ, ಯಲಹಂಕ ಠಾಣೆ ಸರ್ಕಲ್ ನಿಂದ ಕೋಗಿಲು ಸರ್ಕಲ್ ವರೆಗೆ 270 ಕೋಟಿ ರೂ.ನ ಕಾಮಗಾರಿಗೆ ಇಂದು ಶಾಸಕ ವಿಶ್ವನಾಥ್, ಯಲಹಂಕ ವಲಯ ಜಂಟಿ ಆಯುಕ್ತೆ ಪೂರ್ಣಿಮಾ, ಚೀಪ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಹ್ಲಾದ್ ಚಾಲನೆ ನೀಡಿದರು. ನಾಗಾರ್ಜುನ ಕಂಪನಿ ಒಂದೂವರೆ ವರ್ಷದಲ್ಲಿ ಈ ಮೇಲ್ಸೇತುವೆ ಕಾಮಗಾರಿ ‌ಪೂರ್ಣಗೊಳಿಸಲಿದೆ.

Edited By : Manjunath H D
Kshetra Samachara

Kshetra Samachara

07/01/2022 10:36 pm

Cinque Terre

918

Cinque Terre

0

ಸಂಬಂಧಿತ ಸುದ್ದಿ