ಬೆಂಗಳೂರು: ನಾಡಿದ್ದಿನಿಂದ ಎರಡು ವಾರಗಳ ವರೆಗೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರ ಪರಿಣಾಮ ಹೆಚ್ಚಾಗಿ 'ಎಣ್ಣೆ ಪ್ರಿಯ'ರ ಮೇಲಾಗುತ್ತಿದೆ. ಇನ್ಮುಂದೆ ಶನಿವಾರ & ಭಾನುವಾರ ಮದ್ಯ ದೊರೆಯು ವುದಿಲ್ಲ.
ಎಸ್ ವೀಕೆಂಡ್ ನಲ್ಲಿ ಮದ್ಯ ಮಾರಾಟ ನಿಷೇಧಿಸಲು ಅಬಕಾರಿ ಇಲಾಖೆ ಮುಂದಾಗಿದೆ. ಸರ್ಕಾರದ ಆದೇಶ ಪಾಲನೆ ನಿಟ್ಟಿನಲ್ಲಿ ಶನಿವಾರ ಹಾಗೂ ಭಾನುವಾರ ಮದ್ಯದ ಅಂಗಡಿ ಬಂದ್ ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಅಬಕಾರಿ ಇಲಾಖೆಯ ಅಪರ ಮುಖ್ಯ ಆಯುಕ್ತ ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ. ಹಾಗಾಗಿ ಮದ್ಯ ಬೇಕಾದವರು ನಾಳೆ ರಾತ್ರಿಯೊಳಗೆ ಖರೀದಿ ಮಾಡಬೇಕು.
Kshetra Samachara
06/01/2022 03:09 pm