ಬೆಂಗಳೂರು: ʼನಮ್ಮ ಮೆಟ್ರೋʼ ನಾಗಸಂದ್ರ ಹಾಗೂ ಮಾದಾವರ ನಡುವಿನ 3.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗದ ವಿಸ್ತರಣೆಗೆ ನೈಸ್ ಸಂಸ್ಥೆ ಅಡ್ಡಿಯಾಗಿ ಪರಿಣಮಿಸಿದೆ.
ನೈಸ್ ಬಿಎಂಆರ್ ಸಿಎಲ್ ಗೆ ತನ್ನ ನಿರ್ಮಾಣದ ಸ್ಥಳ ತಲುಪಲು ರಸ್ತೆ ಬಳಕೆಗೆ ಅನುಮತಿ ನಿರಾಕರಿಸುತ್ತಿದೆ.
ಹೀಗಾಗಿ ಹಸಿರು ಮಾರ್ಗದ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಎಂಆರ್ ಸಿಎಲ್ ಮಾಸಿಕವಾಗಿ 5.75 ಲಕ್ಷ ರೂ. ಬಾಡಿಗೆ ನೀಡಲು ಸಮ್ಮತಿಸಿದರೂ ರಸ್ತೆ ಬಳಕೆಗೆ ನೈಸ್ ಸಂಸ್ಥೆ ಅನುಮತಿ ನೀಡುತ್ತಿಲ್ಲ. ಇದರಿಂದಾಗಿ 630 ಮೀ. ಕಾಮಗಾರಿ ವಿಳಂಬಕ್ಕೆ ಕಾರಣ ಆಗ್ತಿದೆ ಎಂದು ಆರೋಪಿಸಲಾಗಿದೆ.
Kshetra Samachara
04/01/2022 10:26 am