ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ : ರಸ್ತೆ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಪಿಕ್ ಡ್ಯಾಮ್ ಗೆ ಹಾನಿ

ದೊಡ್ಡಬಳ್ಳಾಪುರ : ಗೋಶಾಲೆಗೆ ರಸ್ತೆ ನಿರ್ಮಿಸಲು ವಿಶ್ವೇಶ್ವರಯ್ಯ ನಿರ್ಮಾಣದ ಘಾಟಿ ಬಳಿಯ ಪಿಕ್ ಡ್ಯಾಮ್ ಹೊಡೆದು ಹಾಕಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯ ಪಿಕ್ ಡ್ಯಾಮ್ ವಿಶ್ವೇಶ್ವರಯ್ಯ ಪಿಕ್ ಡ್ಯಾಮ್ ಮತ್ತು ಘಾಟಿ ಡ್ಯಾಮ್ ಅಂತಾನೇ ಪ್ರಸಿದ್ಧಿ ಪಡೆದಿತ್ತು, ಮಳೆಗಾಲದಲ್ಲಿ ಡ್ಯಾಮ್ ನಿಂದ ಹೊರಬರುವ ನೀರು ಜಲಪಾತವನ್ನ ಸೃಷ್ಠಿ ಮಾಡುತ್ತಿತ್ತು, ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಬರುತ್ತಿದ್ದ ಪ್ರವಾಸಿಗರು ಡ್ಯಾಮ್ ಗೂ ಭೇಟಿ ನೀಡಿ ಜಲಪಾತದ ಸೌಂದರ್ಯ ಸವಿಯುತ್ತಿದ್ದರು, ಈ ವರ್ಷ ಉತ್ತಮ ಮಳೆಯಿಂದ ಡ್ಯಾಮ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು.

ಡ್ಯಾಮ್ ಬಳಿಯೇ ಗೋಶಾಲೆ ಇದ್ದು ಗೋಶಾಲೆಗೆ ಸಂಪರ್ಕಿಸಲು ರಸ್ತೆ ನಿರ್ಮಾಣ ಕಾಮಾಗಾರಿ ಶುರುವಾಗಿತ್ತು, ಡ್ಯಾಮ್ ಹಿನ್ನಿರು ಗೋಶಾಲೆವರೆಗೂ ನಿಂತಿತ್ತು ಇದರಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು, ಡ್ಯಾಮ್ ನೀರು ಖಾಲಿ ಮಾಡಿ ಕಾಮಾಗಾರಿ ಪ್ರಾರಂಭ ಮಾಡುವ ಕಾರಣಕ್ಕೆ ಡ್ಯಾಮ್ ನ ಮಣ್ಣಿನ ದಿಬ್ಬದಲ್ಲಿ ಜೆಸಿಬಿ ಮೂಲಕ ಕಾಲುವೆ ಮಾಡಿ ನೀರು ಖಾಲಿ ಮಾಡಲಾಗಿತ್ತು, ಕಾಲುವೆಯಿಂದ ಭಾರೀ ಪ್ರಮಾಣದ ನೀರು ಹರಿದು ಹೋಗಿತ್ತು. ಇದಕ್ಕಿದಂತೆ ಕಾಲುವೆಯಲ್ಲಿ ನೀರು ಹರಿದು ಬರುವುದನ್ನ ಗಮನಿಸಿದ ರೈತರು ಡ್ಯಾಮ್ ಬಳಿ ಬಂದು ನೋಡಿದ್ದಾಗ ಡ್ಯಾಮ್ ಹಾನಿ ಮಾಡಿರುವುದು ಗಮನಕ್ಕೆ ಬಂದಿದೆ, ತಕ್ಷಣವೇ ಜೆಸಿಬಿ ಮೂಲಕವೇ ಕಾಲುವೆ ಬಂದ್ ಮಾಡಿ ನೀರು ನಿಲ್ಲಿಸಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಮೋಹನ್ ಕುಮಾರಿ ಭೇಟಿ ನೀಡಿ ತಪಿತಸ್ಥರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು, ಸ್ಥಳದಲ್ಲಿ ಯಾವುದೇ ಕೆಲಸ ಮಾಡದಂತೆ ಸ್ಥಗಿತಗೊಳಿಸಲಾಗಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

31/12/2021 03:26 pm

Cinque Terre

552

Cinque Terre

0

ಸಂಬಂಧಿತ ಸುದ್ದಿ