ವರದಿ : ಗಣೇಶ್ ಹೆಗಡೆ
ಬೆಂಗಳೂರು - ರಾಜಕಾಲುವೆ ತಡೆಗೋಡೆ ನಿರ್ಮಾಣದ ವೇಳೆ ನಮ್ಮ ಮೆಟ್ರೋ ಪಿಲ್ಲರ್ ಬೇಸ್ ಮೆಂಟ್ ಹಾನಿಯಾಗಿರುವ ಘಟನೆ ಅಲಸೂರು ನಲ್ಲಿ ಜರುಗಿದೆ.
ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದ ಪಿಲ್ಲರ್ 109 ಅಲಸೂರಿ ನಲ್ಲಿ ಅವಘಡ ಸಂಭವಿಸಿದೆ.
ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಹಾಗೂ ಬಿಎಂ ಆರ್ ಸಿ ಎಲ್ ಎಂ ಡಿ ಅಂಜುಂ ಫರ್ವೇಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ರಾಜಕಾಲುವೆ ತಡೆಗೋಡೆ ಕಾಮಗಾರಿಯನ್ನು ಬಿಬಿಎಂಪಿ ನಡೆಸುತ್ತಿದೆ. ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂಬುದು ಜನರ ಆರೋಪವಾಗಿದೆ. ಈ ಸಂಬಂಧ ಮೆಟ್ರೋ ಪಿಲ್ಲರ್ ಸುತ್ತ ರಿಟೈನಿಂಗ್ ವಾಲ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಅಲಸೂರು ಮೆಟ್ರೋ ನಿಲ್ದಾಣದಿಂದ ಇಂದಿರಾ ನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನ ವೇಗ 35 ಕಿ.ಮೀ ಗಿಂತ 25 ಕಿ.ಮೀ ಗೆ ಇಳಿಸಲಾಗಿದೆ.
PublicNext
28/12/2021 03:51 pm