ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

500 ಕೋಟಿ ವೆಚ್ಚದಲ್ಲಿ ಡಿಪೋ ನಿರ್ಮಾಣ

ಬೆಂಗಳೂರು : ಚಲ್ಲಘಟ್ಟದಲ್ಲಿ ಎಲಿವೇಟೆಡ್ ಡಿಪೋ ನಿರ್ಮಾಣಕ್ಕೆ ತಗುಲುವ ಭಾರಿ ವೆಚ್ಚವನ್ನು ಗಮನ ದಲ್ಲಿ ಇಟ್ಟುಕೊಂಡು ನೆಲ ಮಟ್ಟದಲ್ಲಿಯೇ ಡಿಪೋ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಕುರಿತು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಪಬ್ಲಿಕ್ ನೆಕ್ಸ್ಟ್ ಮಾಹಿತಿ ನೀಡಿದರು.

2024ರ ಹೊತ್ತಿಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ ಚಲಘಟ್ಟ ಮೆಟ್ರೋ ಡಿಪೋಗೆ ಸಂಪರ್ಕ ಕಲ್ಪಿಸುವ ಈ ಯೋಜನೆ ಆಗಿದ್ದು, 500 ಕೋಟಿ ವೆಚ್ಚದಲ್ಲಿ ಡಿಪೋ ನಿರ್ಮಾಣ ಆಗಲಿದೆ. ಚಲ್ಲಘಟ್ಟದಲ್ಲಿ ಎಲಿವೇಟೆಡ್ ಡಿಪೋ ನಿರ್ಮಾಣಕ್ಕೆ ಅಂದಾಜು 900 ಕೋಟಿ ರೂ ಬೇಕಾಗಿತ್ತು. ಇದು ದುಬಾರಿ ವೆಚ್ಚವಾಗುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 400 ಕೋಟಿ ಕಡಿತ ಗೊಳಿಸಿ ನೆಲದಡಿ ಡಿಪೋ ನಿರ್ಮಾಣ ಸರ್ಕಾರ ಅಸ್ತು ಎಂದಿದೆ.

ಬಿಡಿಎ ಕೆಂಪೇಗೌಡ ಲೇಔಟ್ ಅಂಡರ್ ಗ್ರೌಂಡ್ ಸಂಪರ್ಕ್ -

ಇನ್ನೂ ಚಲ್ಲಘಟ್ಟ ನಮ್ಮ ಮೆಟ್ರೋ ಡಿಪೋ ದಿಂದ ಅಲ್ಲೇ ಸಮೀಪದ ಕೆಂಪೇಗೌಡ ಬಡಾವಣೆಗೆ ಅಂಡರ್ ಗ್ರೌಂಡ್ ರಸ್ತೆ ಸಂಪರ್ಕ ವ್ಯವಸ್ಥೆ ಬಿಎಂಆರ್ ಸಿ ಎಲ್ ಮಾಡಲಿದೆ.ಈ ಸಂಬಂಧ 65 ಕೋಟಿ ರೂ . ವೆಚ್ಚ ಮಾಡುತ್ತಿದೆ ಇದರಿಂದ ಅಲ್ಲಿನ ಸುತ್ತಮುತ್ತಲಿನ ನಿವಾಸಿಗರಿಗೆ ಭಾರಿ ಅನುಕೂಲ ಆಗಲಿದೆ.

Edited By : Nirmala Aralikatti
Kshetra Samachara

Kshetra Samachara

23/12/2021 04:32 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ