ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಪ್ಲಾಸ್ಟಿಕ್ ತ್ಯಾಜ್ಯ ಮುಕ್ತತೆಯತ್ತ ಈ ಗ್ರಾಪಂ ಚಿತ್ತ; ಅಗ್ರಹಾರದ ಘನತೆ ಹೆಚ್ಚಿಸಿದ ಘನ ತ್ಯಾಜ್ಯ ಘಟಕ

ದೊಡ್ಡಬಳ್ಳಾಪುರ: ಪರಿಸರಕ್ಕೆ ಮಾರಕ, ಮೂಕಪ್ರಾಣಿಗಳ ಜೀವಕ್ಕೆ ಕಂಟಕ ಪ್ಲಾಸ್ಟಿಕ್ ತ್ಯಾಜ್ಯ. ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಗ್ರಾಮಗಳು ಸಹ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗುತ್ತಿವೆ. ಅದಕ್ಕೊಂದು ಉದಾಹರಣೆ ಚನ್ನದೇವಿ ಅಗ್ರಹಾರದ ಘನ ತ್ಯಾಜ್ಯ ವಿಲೇವಾರಿ ಘಟಕ.

ದೊಡ್ಡಬಳ್ಳಾಪುರ ತಾಲೂಕಿನ ಚನ್ನದೇವಿ ಅಗ್ರಹಾರ ಗ್ರಾಪಂನ ಘನ ತ್ಯಾಜ್ಯ ಘಟಕ ಗ್ರಾಮಗಳಲ್ಲಿ ಹರಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಿದೆ. 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಘಟಕದಲ್ಲಿ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಗ್ರಾಮಗಳಿಂದ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದೆ. ಪಂಚಾಯಿತಿ ವ್ಯಾಪ್ತಿಗೆ ಬರುವ 7 ಗ್ರಾಮಗಳಿಂದ ಸುಮಾರು 1000ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿನಿತ್ಯ ಒಂದು ಮನೆಯಲ್ಲಿ 2 ಕೆಜಿಗೂ ಹೆಚ್ಚು ಕಸ ಸಂಗ್ರಹವಾಗುತ್ತದೆ.

ವಾರದಲ್ಲಿ4 ದಿನ ಗ್ರಾಮಗಳಿಗೆ ಹೋಗಿ ಮನೆಗಳಿಂದ ಘನತ್ಯಾಜ್ಯ ಸಂಗ್ರಹಿಸುವ ವಾಹನ, ನಂತರ ಘಟಕಕ್ಕೆ ತಂದು ಕಸ ವಿಂಗಡಿಸಿ, ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಪ್ಲಾಸ್ಟಿಕ್ ಕವರ್, ಮದ್ಯ ಪ್ಯಾಕೇಟ್, ಬಾಟಲ್, ಕಾಗದ ರಟ್ಟು ಹೆಚ್ಚಾಗಿ ಸಂಗ್ರಹವಾಗುತ್ತವೆ. ಹಸಿ ಕಸವನ್ನು ಜನರು ತಮ್ಮ ತಿಪ್ಪೆಗೆ ಹಾಕುವುದರಿಂದ ಹಸಿಕಸದ ಹೊರೆ ಸದ್ಯಕ್ಕಿಲ್ಲ. ಸ್ಯಾನಿಟರಿ ಪ್ಯಾಡ್ಸ್ ನ್ನು ಯಂತ್ರ ಮೂಲಕ ಘಟಕದಲ್ಲಿ ಸುಟ್ಟು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ತಿಂಗಳಿಗೊಮ್ಮೆ ಪ್ಲಾಸ್ಟಿಕ್ ತ್ಯಾಜ್ಯ ಮಾರಾಟ ಮಾಡಿ, ಅಲ್ಪ ವರಮಾನ ಪಂಚಾಯಿತಿ ಪಡೆಯುತ್ತಿದೆ.

Edited By : Nagesh Gaonkar
Kshetra Samachara

Kshetra Samachara

22/12/2021 04:22 pm

Cinque Terre

1.15 K

Cinque Terre

0

ಸಂಬಂಧಿತ ಸುದ್ದಿ