ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬೆಂಗಳೂರಿನ ಎಲ್ಲ ಎ.ಸಿ. ಬಸ್ ಗಳಲ್ಲಿ ಕ್ಯೂಆರ್ ಕೋಡ್ ಮರು ಪರಿಚಯಿಸಲು ನಿರ್ಧರಿಸಿದೆ.
ಈ ಸಂಬಂಧ ಪೇಟಿಎಂ ಸ್ಪೀಕರ್ ಗಳನ್ನು ಕಂಡಕ್ಟರ್ ಗೆ ನೀಡಲು ನಿರ್ಧರಿಸಲಾಗಿದೆ. ಪಾವತಿ ಮಾಡಿದ ಬಳಿಕ ಆಡಿಯೋ ಮೂಲಕ ಖಚಿತ ಪಡಿಸಲಿದೆ.
500 ಸ್ಪೀಕರ್ ಗಳನ್ನು ಸದ್ಯ ಖರೀದಿ ಮಾಡಲಿರುವ ಬಿಎಂಟಿಸಿಯ 190 ಎ.ಸಿ. ಬಸ್ ಗಳು ರಸ್ತೆಗಿಳಿದಿವೆ. ಮಾರ್ಚ್ ಅಂತ್ಯದ ವೇಳೆಗೆ ನಗರದಲ್ಲಿ 400 ಬಸ್ ಗಳು ರೋಡ್ ಗೆ ಇಳಿಯಲಿವೆ.
ಈ ಮೂಲಕ ಬಿಎಂಟಿಸಿ ಡಿಜಿಟಲ್ ತಂತ್ರಜ್ಞಾನದತ್ತ ವಾಲುತ್ತಿದೆ. ಕಳೆದ ವರ್ಷ ಯುಪಿಐ ಕ್ಯೂಆರ್ ಕೋಡ್ ಬಸ್ ನಲ್ಲಿ ಅಳವಡಿಕೆ ಮಾಡ ಲಾಗಿತ್ತು. ಕಾರಣಾಂತರಗಳಿಂದ ಆ ಯೋಜನೆ ಬಿಎಂಟಿಸಿ ಸ್ಥಗಿತಗೊಳಿಸಿತ್ತು.
Kshetra Samachara
16/12/2021 06:18 pm