ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಖಾಸಗಿ ಮಾಲ್ ಗೆ ಬಿಬಿಎಂಪಿ ರಸ್ತೆ ಬಳಕೆ; ಸಾರ್ವಜನಿಕರ ವಿರೋಧ

ವಿಶೇಷ ವರದಿ: ಗಣೇಶ್ ಹೆಗಡೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಖಾಸಗಿ ಒಡೆತನದ ಮಾಲ್ ಗೆ ರಸ್ತೆ ಅಂಡರ್ ಪಾಸ್ ನಿರ್ಮಾಣ ಮಾಡಿಕೊಟ್ಟಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ನಗರದ ಸುಜಾತ ಟಾಕೀಸ್ ಮುಂಭಾಗದ ಅಂಡರ್ ಪಾಸ್ ನಿಂದ ಲುಲೂ ಮಾಲ್ ಗೆ ಪ್ರವೇಶ ಮಾಡಿಕೊಡುವ ಅಂಡರ್ ಪಾಸ್ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೌದು. ಪಾಲಿಕೆಯ ಈ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಲುಲೂ ಸೂಪರ್ ಮಾರ್ಕೆಟ್ ಮಾಲ್ ಗೆ ಬಿಬಿಎಂಪಿ ಅಂಡರ್ ಪಾಸ್ ವ್ಯವಸ್ಥೆ ಮಾಡಿದ್ದನ್ನು ಸಾರ್ವಜನಿಕರು ವಿರೋಧಿಸಿದ್ದಾರೆ. ಈ ಬಗ್ಗೆ ಪಾಲಿಕೆಯ ಆಡಳಿತ ವರ್ಗವನ್ನು ಕೇಳಿದಾಗ, ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.

Edited By : Manjunath H D
Kshetra Samachara

Kshetra Samachara

15/12/2021 02:21 pm

Cinque Terre

924

Cinque Terre

0

ಸಂಬಂಧಿತ ಸುದ್ದಿ