ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಗೆ ಕೊಚ್ಚಿ ಹೋದ ಹೂಡಿ ಕೆರೆ ದಂಡೆ; ಅಧಿಕಾರಿಗಳು ಡೋಂಟ್ ಕೇರ್

ಬೆಂಗಳೂರು: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಯ ದಂಡೆ ಕೊಚ್ಚಿ ಹೋದರೂ ಅಧಿಕಾರಿಗಳು ಮಾತ್ರ ಕಂಡರೂ ಕಾಣದಂತೆ ಇದ್ದಾರೆ.

ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದ ಹೂಡಿ ಗ್ರಾಮದಲ್ಲಿ 15 ಎಕರೆ 10 ಗುಂಟೆಯಲ್ಲಿರುವ ಹೂಡಿ ಕೆರೆಯನ್ನು 2.5 ಕೋಟಿ ವೆಚ್ಚದಲ್ಲಿ‌ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದಾಗಿ ಕೆರೆ ದಂಡೆ ಒಡೆದಿದ್ದು, ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ.

ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಪ್ರತಿನಿತ್ಯವೂ ನೂರಾರು ವಾಯು ವಿಹಾರಿಗಳು ಕೆರೆಯ ಸುತ್ತ ವಾಕ್ ಮಾಡುವಂತಾಗಿದೆ. ಈ ಸಂದರ್ಭ ವಾಯು ವಿಹಾರಿ ಮಂಜುನಾಥ್ ಮಾತನಾಡಿ, ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ ಕೆರೆ ದಂಡೆ ಕಾಮಗಾರಿ ಮುಗಿದು ಒಂದು ವರ್ಷದಲ್ಲೇ ದಂಡೆ ಕುಸಿದಿದೆ. ಆದಷ್ಟೂ ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ಹಾನಿಗೀಡಾದ ಕೆರೆ ದಂಡೆ ಸರಿಪಡಿಸಲು ಒತ್ತಾಯಿಸಿದರು.

Edited By : Nagesh Gaonkar
Kshetra Samachara

Kshetra Samachara

11/12/2021 05:57 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ