ಬೆಂಗಳೂರು:ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕೈ ಸುಡುತ್ತಿದೆ.ಇದರ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ನ್ನ ಎಸ್ಕಾಂಗಳು ನೀಡಿವೆ. ಇಂಧನ ನಿರ್ವಹಣೆ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್ ಸಿ ಮುಂದೆ ಪ್ರಸ್ತಾವನೆ ಇಟ್ಟಿವೆ.
ರಾಜ್ಯದಲ್ಲಿ ಇನ್ನೂ ಬೇಸಿಗೆ ಆರಂಭವಾಗಿಲ್ಲ..ಆದ್ರೂ ಬೇಸಿಗೆ ಮುನ್ನವೇ ವಿದ್ಯುತ್ ಗ್ರಾಹಕರಿಗೆ ಬರೆ ಹಾಕಲು ಎಸ್ಕಾಂಗಳು ಮುಂದಾಗಿವೆ...ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಕಂಗಾಲಾಗಿರುವ ಮಂದಿಗೆ ಮತ್ತೆ ವಿದ್ಯುತ್ ಸರಬರಾಜು ಕಂಪನಿಗಳು ಬರೆ ಶಾಕ್ ನೀಡಿವೆ..ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಾಂ,ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿಬಾರಿಯಂತೆ ಈ ಬಾರಿಯೂ ದರ ಹೆಚ್ಚಳದ ಪ್ರಸ್ತಾಪ ಕೆಇಆರ್ಸಿ ಮುಂದೆ ಇಟ್ಟಿವೆ..ಬೆಸ್ಕಾಂ ಕೂಡ ಈ ಬಾರಿ 1 ರೂ 50 ಹೆಚ್ಚಳಕ್ಕೆ ಮನವಿ ಮಾಡಿದೆ..ಕಳೆದ ಬಾರಿ 1 ರೂ 39 ರೂ ಹೆಚ್ಚಳಕ್ಕೆ ಪ್ರಸ್ತಾಪ ಇಡಲಾಗಿತ್ತು..ಆದ್ರೆ ಕೆಇಆರ್ಸಿ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಕೇವಲ 30 ಪೈಸೆ ಮಾತ್ರ.
ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾಪನೆಗೆ ಸಾಧಕ ಭಾದಕಗಳನ್ನ ಪರಿಗಣಿಸಿ,ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ವಿದ್ಯುತ್ ದರ ಹೆಚ್ಚಳ ಮಾಡಲಿದೆ. ಪ್ರತಿ ಯೂನಿಟ್ ಗೆ ಇಂತಿಷ್ಟು ದರ ಹೆಚ್ಚಳ ಮಾಡಬೇಕು ಅನ್ನೋದು
ಐದೂ ಎಸ್ಕಾಂಗಳ ಬೇಡಿಕೆಯಾಗಿದೆ..ಈ ಸಂಬಂಧ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಿ ಹೊಸ ದರ ಪರಿಷ್ಕರಣೆ ಪಟ್ಟಿಯಲ್ಲಿ ಬಿಡುಗಡೆ ಮಾಡಲಿದೆ.
ವಿದ್ಯುತ್ ನಿರ್ವಹಣೆ ಹೆಸರಿನಲ್ಲಿ 2009ರ ಪ್ರತಿ ಯೂನಿಟ್ ಗೆ 34.ಪೈಸೆ, 2010 ರಲ್ಲಿ 30 ಪೈಸೆ, 2011ರಲ್ಲಿ 28 ಪೈಸೆ ಮತ್ತು 2012ರಲ್ಲಿ 13 ಪೈಸೆ 2013 ರಲ್ಲಿ 13 ಪೈಸೆ, 2017 ರಲ್ಲಿ 48 ಪೈಸೆ ಹೆಚ್ಚಳ ಮಾಡಲಾಗಿತ್ತು, ಆದರೆ ಈ ಬಾರಿ ದುಬಾರಿ ದರ ಪರಿಷ್ಕರಣೆಯಾಗಿವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾಗಿರುವ ಮಂದಿಗೆ ಮತ್ತೆ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.ವಿದ್ಯುತ್ ದರ ಹೆಚ್ಚಳ ವಾದರೆ . 2.31 ಕೋಟಿ ಗ್ರಾಹಕರಿಗೆ ವಿದ್ಯತ್ ದರ ಬಿಸಿ ತಟ್ಟಲಿದೆ.
Kshetra Samachara
10/12/2021 07:29 pm