ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಂದಿನಿಂದ ಆಟೋ ಪ್ರಯಾಣ ಮತ್ತಷ್ಟು ದುಬಾರಿ

ಬೆಂಗಳೂರು: ಕೊರೊನಾ ಹೊಡೆತ, ಗ್ಯಾಸ್ ದರ ಏರಿಕೆಯಿಂದ ನಲುಗಿದ್ದ ಜನರಿಗೆ ಇವತ್ತಿನಿಂದ ಆಟೋ ಸಂಚಾರವೂ ದುಬಾರಿ ಆಗಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಆಟೋ ದರ ದುಬಾರಿಯಾಗಲಿದೆ.

ಇನ್ಮುಂದೆ ಮೊದಲ 2 ಕಿ.ಮೀ.ಗೆ 30 ರೂಪಾಯಿ ನಿಗದಿಯಾಗಲಿದ್ದು, ಒಮ್ಮೆ ಆಟೋ ಏರಿದರೆ 30 ರೂಪಾಯಿ ಕೊಡಲೇಬೇಕಾಗುತ್ತೆ. ಇಲ್ಲಿಯವರೆಗೆ 25 ರೂಪಾಯಿ ಕನಿಷ್ಟ ದರವಾಗಿತ್ತು. ಇದೀಗ 2 ಕಿ.ಮೀ ಬಳಿಕ ಪ್ರತಿ 1 ಕಿಲೋ ಮೀಟರ್‌ಗೆ 15 ರೂಪಾಯಿಯಂತೆ ಚಾರ್ಜ್​​ ಬೀಳಲಿದೆ.

* ಕನಿಷ್ಠ ದರ ಮೊದಲ 2 ಕಿ.ಮೀಗೆ ದರ -30 ರೂಪಾಯಿ (ಮೂರು ಪ್ರಯಾಣಿಕರಿಗೆ ಮಾತ್ರ)

* ನಂತರದ ಪ್ರತಿ ಕಿಲೋ ಮೀಟರ್ -15 ರೂ (ರೂ.ಹದಿನೈದು ಮಾತ್ರ, ಮೂರು ಪ್ರಯಾಣಿಕರಿಗೆ)

* ಕಾಯುವಿಕೆ ದರ: ಮೊದಲ ಐದು ನಿಮಿಷ ಉಚಿತ, ಮೊದಲ ಐದು ನಿಮಿಷದ ನಂತರ ಪ್ರತಿ ಹದಿನೈದು ನಿಮಿಷ ಅಥವಾ ಅದರ ಭಾಗಕ್ಕೆ 5 ರೂಪಾಯಿ ಏರಿಸಬೇಕು

* ಪ್ರಯಾಣಿಕರ ಲಗೇಜು ದರ -ಮೊದಲ 20 ಕೆಜಿಗೆ ಉಚಿತ. ಮೊದಲ 20 ಕೆಜಿಯಿಂದ ನಂತರದ ಪ್ರತಿ 20 ಕೆಜಿಗೆ ಅಥವಾ ಅದರ ಭಾಗಕ್ಕೆ 5 ರೂಪಾಯಿ ಹೆಚ್ಚಿಸಬೇಕು

* ರಾತ್ರಿ ವೇಳೆ ದರ: ಸಾಮಾನ್ಯ ದರ + ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು (ರಾತ್ರಿ 10 ರಿಂದ ಬೆಳಗಿನ ಜವಾ 5 ಗಂಟೆಯವರೆಗೆ)

Edited By : Vijay Kumar
Kshetra Samachara

Kshetra Samachara

01/12/2021 11:02 pm

Cinque Terre

360

Cinque Terre

0

ಸಂಬಂಧಿತ ಸುದ್ದಿ