ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಪ್ರಾರಂಭಿಕ ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ ನೀಡಲು ಪರಿಷ್ಕೃತ ಶುಲ್ಕವನ್ನು ಬಿಬಿಎಂಪಿ ನಿಗದಿ ಮಾಡಿದೆ.
ಸಾಮಾನ್ಯ ಮನೆಗೆ 2,400 ರೂ. ನಕ್ಷೆ ಮಂಜೂರಾತಿ ಶುಲ್ಕವಿರಲಿದೆ. ವಸತಿ ಸಮುಚ್ಚಯ, ವಸತಿಯೇತರ ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಕಟ್ಟಡ, ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಸ್ವಾಧೀನಾನುಭವ ಪತ್ರದ ಬಗ್ಗೆ ಶುಲ್ಕ ಹೆಚ್ಚು ವಿಧಿಸದಂತೆ ಬಿಬಿಎಂಪಿಗೆ ಹೈಕೋರ್ಟ್ ತಾಕೀತು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಪರಿಷ್ಕೃತ ಆದೇಶ ಹೊರಡಿಸಿರುವ ಪಾಲಿಕೆ ಹಿಂದಿನ ದರಕ್ಕಿಂತ ಶೇ.70 ಶುಲ್ಕ ಕಡಿತ ಮಾಡಲಾಗಿದೆ.
100 ಚ.ಮೀ. ವಸತಿ ಕಟ್ಟಡ 15 ರೂ., 100-250 ಚ.ಮೀ. ವಸತಿ ಕಟ್ಟಡ 30 ರೂ., 251ರಿಂದ 500 ಚ.ಮೀ. ವಸತಿ ಕಟ್ಟಡ 45 ರೂ., 500 ಚ.ಮೀ. ಮೇಲ್ಪಟ್ಟ ವಸತಿ ಕಟ್ಟಡಕ್ಕೆ 60 ರೂ., ವಸತಿ ಸಮುಚ್ಚಯ ಕಟ್ಟಡ 80 ರೂ.,ವಾಣಿಜ್ಯ ಕಟ್ಟಡಕ್ಕೆ 120 ರೂ. ನಿಗದಿಯಾಗಿದೆ.
Kshetra Samachara
25/11/2021 07:51 am