ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊಸ ವರ್ಷಕ್ಕೆ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಕಾರ್ಯಾರಂಭ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಫ್ರೀಡಂ ಪಾರ್ಕ್ ಬಳಿ ನಿರ್ಮಾಣಗೊಳ್ಳುತ್ತಿರುವ ನಿರೀಕ್ಷಿತ ಬಹು ಮಹಡಿ ಕಟ್ಟಡ ಪಾರ್ಕಿಂಗ್‌ ಹೊಸ ವರ್ಷದ ವೇಳೆಗೆ (2022, ಜನವರಿ) ಸಾರ್ವಜನಿಕರ ಬಳಕೆಗೆ ತೆರೆಯುವ ಸಾಧ್ಯತೆ ಇದೆ.

ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ನಗರೋತ್ಥಾನ ಯೋಜನೆಯಡಿಯಲ್ಲಿ 79.81 ಕೋಟಿ ರೂ. ವೆಚ್ಚದಲ್ಲಿ ಬಹು ಮಹಡಿ ಕಟ್ಟಡ ಪಾರ್ಕಿಂಗ್‌ ನಿರ್ಮಾಣವಾಗುತ್ತಿದೆ.

ತಳಮಹಡಿಯಲ್ಲಿ ಮೂರು ಮಹಡಿಗಳನ್ನು (-1, -2, -3) ನಿರ್ಮಿಸಲಾಗಿದ್ದು, 556 ಕಾರುಗಳು ಮತ್ತು 445 ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಬಹುದಾಗಿದೆ.

ಬಹು ಮಹಡಿ ಕಟ್ಟಡ ಪಾರ್ಕಿಂಗ್‌ ಕಾಮಗಾರಿ ಪೂರ್ಣಗೊಂಡ ನಂತರ ಗಾಂಧಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನಗಳ ಪಾರ್ಕಿಂಗ್‌ಗಾಗಿ ಪರದಾಟ ತಪ್ಪಲಿದೆ.

Edited By : Manjunath H D
Kshetra Samachara

Kshetra Samachara

22/11/2021 02:01 pm

Cinque Terre

286

Cinque Terre

0

ಸಂಬಂಧಿತ ಸುದ್ದಿ