ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಟ್ಟ ಮೋಟರ್ ಗೂ ಕಟ್ಟ ಬೇಕಂತೆ ನೀರಿನ ಬಿಲ್!

ಬೆಂಗಳೂರು: ನೀರಿಗಾಗಿ ಕಾಯ್ದು ಕುಳಿತ ಜನ. ಟ್ಯಾಂಕರ್ ಬಂದದ್ದೇ ತಡ, ಬಿಂದಿಗೆ ತೆಗೆದ್ಕೊಂಡು ನೀರಿಡಿದುಕೊಳ್ತಿರುವ ಚಿತ್ರಣ, ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿರೋ ಸ್ಥಳೀಯರು... ಈ ಎಲ್ಲಾ ದೃಶ್ಯಾವಳಿಗೆ ಸಾಕ್ಷಿಯಾಗಿದ್ದು, ಕೆಂಗೇರಿ ರೈಲ್ವೆ ಸ್ಟೇಷನ್ ರೋಡ್.

ಹೌದು... ಕಳೆದ ಹಲವು ದಿನಗಳಿಂದ ಈ ರಸ್ತೆಯಲ್ಲಿ ಬಹಳಷ್ಟು ನೀರಿನ ಸಮಸ್ಯೆಯಿದೆ.‌‌ ನಿತ್ಯವೂ ನೀರಿಲ್ಲದೆ ಜನರು ನರಕ ಅನುಭವಿಸುತ್ತಿದ್ದಾರೆ. ಅದ್ರಲ್ಲೂ ಈ ತಿಂಗಳಿನಲ್ಲಿ ಲಕ್ಷ್ಮಿ ಹಬ್ಬ, ಶ್ರಾವಣ... ಹೀಗೆ ಹಲವಾರು ಹಬ್ಬಗಳು ಬರುತ್ತವೆ. ಹೀಗಾಗಿ ಒಂದು ಹನಿ ಮನೆಯಲ್ಲಿ ನೀರಿಲ್ಲ! ನಾವೇನು ಏನು‌ ಮಾಡಬೇಕು ಅಂತಾರೆ ಸ್ಥಳೀಯರು.

ಈ ಏರಿಯದಲ್ಲಿ ನೀರಿನ ಮೋಟಾರ್ ಕೆಟ್ಟು ಸುಮಾರು ದಿನಗಳಾದ್ರೂ ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ತಲೆ ಹಾಕಿಲ್ಲ. ನೀರಿಲ್ಲ... ಆದ್ರೂ ಬಿಲ್ ಬರ್ತಾನೇ ಇದೆ. ನೀರು ಬರಲ್ಲ, ಬಿಲ್ ಯಾಕೆ ಕಟ್ಟ ಬೇಕು!? ಎಂದು ಸಾರ್ವಜನಿಕರು ಬಿಬಿಎಂಪಿ ಅವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು, ಸಾರ್ವಜನಿಕರೇ ತಮ್ಮ ಹಣ ಕೊಟ್ಟು ಟ್ಯಾಂಕರ್‌ ಗಳಲ್ಲಿ ನೀರನ್ನು ತರಿಸಿಕೊಳ್ತಿದ್ದಾರೆ. ಒಟ್ಟಾರೆ ಇಂತಹ ಪ್ರತಿಷ್ಠಿತ ನಗರದ ಪರಿಸ್ಥಿತಿಯೇ ಹೀಗೆ ಆದ್ರೆ, ಬೇರೆ ಕಡೆ ಅದು ಯಾವ ಮಟ್ಟದಲ್ಲಿರಬಹುದು? ನಿದ್ರೆಯಲ್ಲಿರುವ ಅಧಿಕಾರಿಗಳೇ... ಎಚ್ಚೆತ್ತುಕೊಳ್ಳಿ. ಜನ ಈಗಾಗ್ಲೇ ಆಕ್ರೋಶದಲ್ಲಿದ್ದಾರೆ. ಅವರು ಏನಾದ್ರೂ ಮಾಡುವ ಮುಂಚಿತವಾಗಿ ನೀರಿಗೆ ವ್ಯವಸ್ಥೆ ಮಾಡಿ.

Edited By :
PublicNext

PublicNext

08/08/2022 09:58 pm

Cinque Terre

35.72 K

Cinque Terre

0

ಸಂಬಂಧಿತ ಸುದ್ದಿ