ವರದಿ: ಗೀತಾಂಜಲಿ
ಬೆಂಗಳೂರು: ಜಲ ಮಂಡಳಿಗೆ ನೀರಿನ ಬಿಲ್ ಪಾವತಿ ಮಾಡದಿರುವ ಗ್ರಾಹಕರಿಂದ ಕಳೆದ 5 ವರ್ಷಗಳಲ್ಲಿ ಬೆಂಗಳೂರು ಮಹಾನಗರ ಕಾರ್ಯಪಡೆ ಬಿಎಂಟಿಎಫ್ 19.34 ಕೋಟಿ ರೂ. ವಸೂಲಿ ಮಾಡಿಕೊಡಲು ನೆರವಾಗಿದೆ.
ಕಾವೇರಿ ನೀರು ಸರಬರಾಜಿಗೆ ಜಲ ಮಂಡಳಿಯಿಂದ ನೀರಿನ ಶುಲ್ಕ ವಸೂಲಿ ಮಾಡುತ್ತಿದೆ.
ಅದರಂತೆ ನಗರದಲ್ಲಿ 10.5 ಲಕ್ಷ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ.
ಇದರಿಂದ ವಾರ್ಷಿಕ 1,600 ಕೋಟಿ ರೂ. ಆದಾಯ ಪಡೆಯುತ್ತಿದೆ. ಆದರೆ, ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಗ್ರಾಹಕರು ನೀರಿನ ಬಿಲ್ ಸಮರ್ಪಕವಾಗಿ ಪಾವತಿಸದಿರುವ, ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದ ಮತ್ತು ನೀರಿನ ಕಳ್ಳತನ ಮಾಡುವವರ ವಿರುದ್ಧ ಕ್ರಮಕ್ಕೆ ಜಲಮಂಡಳಿ ಬಿಎಂಟಿಎಫ್ ಗೆ ದೂರು ನೀಡಿದೆ.
ಅದರಂತೆ 2018 ರಿಂದ 2022ರ ಜೂನ್ ಅಂತ್ಯಕ್ಕೆ ಒಟ್ಟು 551 ದೂರುಗಳು ದಾಖಲಿಸಲಾಗಿದೆ. ಆ ದೂರಿನ ಹಿನ್ನೆಲೆಯಲ್ಲಿ ಬಿಎಂಟಿಎಫ್ ಕೈಗೊಂಡ ಕ್ರಮಗಳಿಂದಾಗಿ ಜಲ ಮಂಡಳಿಗೆ ಒಟ್ಟು 19.34 ಕೋಟಿ ರೂ. ವಸೂಲಿಯಾಗಿದೆ.
Kshetra Samachara
16/07/2022 10:29 pm