ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಳೆತಂದಿಟ್ಟ ಅವಾಂತರ

ಸತತ ಮಳೆಯಿಂದ ಬೆಂಗಳೂರು ನಗರ ತೊಯ್ದು ತೊಪ್ಪೆಯಾಗಿದ್ದು, ಮಹದೇವಪುರ ವಲಯದ ಹೊರಮಾವು ಸಾಯಿ ಬಡಾವಣೆ, ನಾಗಪ್ಪರೆಡ್ಡಿ ಬಡಾವಣೆ, ರಾಮಮೂರ್ತಿ ನಗರ ಮುಖದಯರಸ್ತೆ, ಹೆಚ್‌ಎಎಲ್ ಭಾಗದ ತಗ್ಗು ಪ್ರದೇಶ, ಸರ್ಜಾಪುರ ಮುಖ್ಯರಸ್ತೆ, ರೈನ್ ಬೊ ಬಡಾವಣೆ, ಬೆಳ್ಳಂದೂರು ಇಕೋಸ್ಪೇಸ್ ಮುಖ್ಯರಸ್ತೆ, ಬಳಗೆರೆ, ವರ್ತೂರು ಭಾಗಗಳಲ್ಲಿ ಹಲವು ಅಪಾರ್ಟ್ಮೆಂಟ್‌ಗಳು ಜಲಾವೃತವಾಗಿವೆ.

ಸರ್ಜಾಪುರ ಮುಖ್ಯರಸ್ತೆಯ ಬೆಳ್ಳಂಡೂರು ಇಕೋಸ್ಪೇಸ್ ಬಳಿ 4 ಅಡಿಗೂ ಹೆಚ್ಚು ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರು ಪರಾದಾಡುತ್ತಿದ್ದಾರೆ. ವೈಟ್ ಫೀಲ್ಡ್‌ನ ನಲ್ಲೂರಹಳ್ಳಿಯ ಡಿಎನ್‌ಎ, ಜೈ ಫಾರ್ಚೂನ್ ಅಪಾರ್ಟ್‌ಮೆಂಟ್‌ಗಳು ಸಂಪೂರ್ಣ ಜಲಾವೃತವಾಗಿವೆ. ಅಗ್ನಿಶಾಮಕ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದು, ಬೋಟ್‌ಗಳ ಮುಖಾಂತರ ಜನರನ್ನು ಹೊರತರುತ್ತಿದ್ದಾರೆ. ಮಳೆ ಬಂದಾಗಷ್ಟೇ ಬರುವ ಅಧಿಕಾರಿ, ಜನಪ್ರತಿನಿಧಿಗಳು ರಾಜಾಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ ಸಮಸ್ಯೆಗಳನ್ನು ಪರಿಹರಿಸಬೇಕಿದೆ.

Edited By :
PublicNext

PublicNext

05/09/2022 03:31 pm

Cinque Terre

22.97 K

Cinque Terre

0

ಸಂಬಂಧಿತ ಸುದ್ದಿ