ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಈದ್ಗಾ ಮೈದಾನ ಪಾಲಿಕೆ ಸ್ವತ್ತು ಘೋಷಿಸುವವರೆಗೂ ಜಗ್ಗಲ್ಲ"; ನಾಗರಿಕರ ಒಕ್ಕೂಟ ಪಟ್ಟು

ಬೆಂಗಳೂರು: ಈದ್ಗಾ ಮೈದಾನ ವಿವಾದ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಿಚ್ಚು ಈಗ ಮತ್ತಷ್ಟು ತೀವ್ರ ಸ್ವರೂಪ ಪಡೆಯುತ್ತಿದೆ. ಮುಂದಿನ ಹೋರಾಟಕ್ಕಾಗಿ ಬೇರೆ ಬೇರೆ ಪ್ಲ್ಯಾನ್ ಮಾಡಿಕೊಳ್ಳಲು ಚಾಮರಾಜಪೇಟೆ ನಾಗರಿಕರು ಸಜ್ಜಾಗಿದ್ದಾರೆ.

ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಮತ್ತೆ ಇಂದು ಸಭೆ ನಡೆಯಿತು. ಸರ್ಕಾರಕ್ಕೆ ಮನವಿ ಕೊಡಲು ಒಮ್ಮತದ ನಿರ್ಧಾರ ಕೈಗೊಂಡು ಸಿಎಂ, ಗೃಹ ಸಚಿವ ಮತ್ತು ಬಿಬಿಎಂಪಿ ಕಮಿಷನರ್ ಭೇಟಿ ಮಾಡಲು ವೇದಿಕೆ ನಿರ್ಧರಿಸಿತು. ಬಿಬಿಎಂಪಿ ಸ್ವತ್ತು ಎಂದು ಘೋಷಣೆ ಆಗುವ ತನಕ ಜಗ್ಗಲ್ಲ ಎಂದು ಒಕ್ಕೂಟ ಪದಾಧಿಕಾರಿಗಳು ನಿರ್ಣಯ ಕೈಗೊಂಡರು.

ಚಾಮರಾಜ ಪೇಟೆ ಮೈದಾನವನ್ನು ಆಟದ ಮೈದಾನವನ್ನಾಗಿ ಉಳಿಸಿಕೊಳ್ಳಲು ಇಂದು ಸಭೆ ಮಾಡಿ ಹೋರಾಟದ ರೂಪುರೇಷೆ ಬಗ್ಗೆ ನಾಗರಿಕರು ಚರ್ಚಿಸಿದ್ದಾರೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಅಧ್ಯಕ್ಷ ರಾಮೇಗೌಡ ತಿಳಿಸಿದರು.

ಈ ಹಿನ್ನೆಲೆಯಲ್ಲಿ 2-3 ದಿನದೊಳಗೆ ನೂರಾರು ಬೈಕ್ ರ್ಯಾಲಿಗೆ ಪ್ಲ್ಯಾನ್ ಮಾಡಿದ್ದೇವೆ. ಮೆರವಣಿಗೆ ಮೂಲಕ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಮನವಿ ಪತ್ರ ನೀಡಲು ಚಿಂತನೆ ನಡೆಸಿದ್ದೇವೆ. ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಮೇಲೂ ಒತ್ತಡ ಹೇರಲು ನಿರ್ಧಾರ ಮಾಡಿದ್ದೇವೆ ಎಂದು ನಾಗರಿಕ ವೇದಿಕೆಯ ರುಕ್ಮಾಂಗದ ತಿಳಿಸಿದರು.

ಚಾಮರಾಜಪೇಟೆ ನಾಗರಿಕರು ಈದ್ಗಾ ಮೈದಾನಕ್ಕೆ ಸಂಬಂಧಿಸಿ ಹಲವು ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಲ್ಲದೆ, ಸಿಎಂ ಭೇಟಿಗೆ ಅವಕಾಶ ಕೊಡಿಸುವಂತೆ ಪಟ್ಟು ಹಿಡಿದಿದ್ದೇವೆ. ನಾಗರಿಕರು ಸಹ ಸಿಎಂ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಬಿಎಂಪಿ ಕಮಿಷನರ್ ಭೇಟಿಗೆ ನಿರ್ಧರಿಸಿದ್ದಾರೆ ಎಂದು ರುಕ್ಮಾಂಗದ ಹೇಳಿದರು.

Edited By :
Kshetra Samachara

Kshetra Samachara

13/07/2022 10:48 pm

Cinque Terre

5.28 K

Cinque Terre

0

ಸಂಬಂಧಿತ ಸುದ್ದಿ