ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾಕು ನಾಯಿಗಳ ಪಾರ್ಕ್ ಮುಚ್ಚಿದ ಸ್ಥಳೀಯರು

ಬೆಂಗಳೂರು: ಇಷ್ಟು ವರ್ಷಗಳ ಕಾಲ ಈ ಪಾರ್ಕ್ ಮನೆಯಲ್ಲಿ ಸಾಕುವ ನಾಯಿಗಳಿಗೆ ವಾಕಿಂಗ್ ಪಾರ್ಕ್ ಆಗಿ ಮಾರ್ಪಟ್ಟಿತ್ತು. ಈ ಪಾರ್ಕಿನ ಹೆಸರು ಕೂಡ ಬದಲಾಗಿತ್ತು. ಆದರೆ ಈಗ ಡಾಗ್ ಪಾರ್ಕ್ ಇಲ್ಲಿನ ಸ್ಥಳೀಯರಿಂದ ಮುಚ್ಚಲಾಗಿದೆ ಮತ್ತು ಸಾಕು ನಾಯಿಗಳನ್ನು ಉದ್ಯಾನದೊಳಗೆ ತರುವಂತಿಲ್ಲ ಎಂದು ಫಲಕ ಕೂಡ ಹಾಕಲಾಗಿದೆ.

ಇಲ್ಲಿನ ಸ್ಥಳೀಯ ನಿವಾಸಿಗಳು ಪಾರ್ಕನ್ನು ಮುಚ್ಚಿ ಈಗ ನಾಯಿಗಳನ್ನು ಪಾರ್ಕಿನ ಒಳಗೆ ಬರದಂತೆ ಮಾಡಿದ್ದಾರೆ. ಈ ಪಾರ್ಕ್ ಮುಚ್ಚಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಸಾಕುತ್ತಿರುವ ನಾಯಿಗಳನ್ನು ಎಲ್ಲಿ ವಾಕಿಂಗ್ ಮಾಡಿಸಬೇಕೆಂದು ಸಾಕುನಾಯಿಗಳ ಮಾಲೀಕರು ಕಿಡಿಕಾರುತ್ತಿದ್ದಾರೆ.ಇದು ಬಿಟಿಎಂ ಲೇಔಟ್ ನ 2ನೇ ಹಂತದಲ್ಲಿರುವ ಡಾಗ್ ಪಾರ್ಕ್.

ಇಷ್ಟು ವರ್ಷಗಳು ನಾಯಿಗಳು ಈ ಪಾರ್ಕ್‌ನಲ್ಲಿ ಆಟವಾಡಿಕೊಂಡು ಓಡಾಡಿಕೊಂಡು ಇತ್ತು. ಆದರೆ ಇಲ್ಲಿನ ನಿವಾಸಿಗಳು ಪಾರ್ಕ್‌ಅನ್ನು ಮುಚ್ಚಿರುವ ಹಿನ್ನಲೆಯಲ್ಲಿ ಸಾಕು ನಾಯಿಗಳನ್ನು ರಸ್ತೆಗಳ ಮೇಲೆ ವಾಕಿಂಗ್ ಮಾಡಿಸುವ ಪರಿಸ್ಥಿತಿ ಉಂಟಾಗಿದೆ.

ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By :
Kshetra Samachara

Kshetra Samachara

25/05/2022 09:16 pm

Cinque Terre

5.33 K

Cinque Terre

0

ಸಂಬಂಧಿತ ಸುದ್ದಿ